Belagavi News In Kannada | News Belgaum

23 ರಂದು ಕಾಂಗ್ರೆಸ್ ಭವನದಲ್ಲಿ ಸಂಜೆ 4-00 ಗಂಟೆಗೆ ಸರಳ ಸಮಾರಂಭದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

ಬೆಳಗಾವಿ:  ಕೆಪಿಸಿಸಿ ಕಾರ್ಯಾಧ್ಯಕ್ಷ   ಡಿ.ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮತ್ತು ರಾಜ್ಯ ಮತ್ತು ಜಿಲ್ಲೆಯ ಹಿರಿಯ ಮುಖಂಡರುಗಳು, ಪದಾಧಿಕಾರಿಗಳ ಸಮ್ಮುಖದಲ್ಲಿ   ಇದೇ ಗುರುವಾರ  23 ರಂದು ಕಾಂಗ್ರೆಸ್  ಭವನದಲ್ಲಿ ಸಂಜೆ 4-00 ಗಂಟೆಗೆ  ಸರಳ ಸಮಾರಂಭದಲ್ಲಿ ಅಧಿಕೃತವಾಗಿ  ಕಾಂಗ್ರೆಸ್ ಸೇರ್ಪಡೆಯಾಗುತ್ತೆನೆ ಎಂದು ಹಿರಿಯ ರಾಜಕೀಯ ಧುರೀಣ ಅಶೋಕ ಪೂಜಾರಿ ಹೇಳಿದರು.

 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,   ನನ್ನ ಹಿತೈಸಿಗಳು, ಮುಖಂಡರುಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ  ಅಧಿಕೃತವಾಗಿ ಸೇರುವುದಾಗಿ ತಿಳಿಸಿದರು.

 

ಲೋಕಸಭೆಯ ಉಪಚುನಾವಣೆಗಿಂತಲೂ ಮುಂಚಿವಾಗಿ  ಕಾಂಗ್ರೆಸ್  ಗೆ ಕೈ ಜೋಡಿಸಲು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ಪಕ್ಷ ಸೇರಲು ಅಧಿಕೃತವಾಗಿ ಆಹ್ವಾನ ನೀಡಿದ್ದರು.  ಅದಕ್ಕೆ ಪೂರಕವಾಗಿಯೇ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯನವರು

ಹಾಗೂ ಪಕ್ಷದ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕ ಸಹಮತ ವ್ಯಕ್ತಪಡಿಸಿದ್ದರು. ಅದರೆ ಕಾರಣಾಂತರಗಳಿಂದ ಕಾಂಗ್ರೆಸ್  ಪಕ್ಷ ಸೇರ್ಪಡೆ ವಿಳಂಬವಾಗಿದ್ದರೂ ಸಹ ಇತ್ತೀಚೆಗೆ ರಾಯಭಾಗದಲ್ಲಿ ವಿಧಾನ ಪರಿಷತ್ತಿನ ಚುನಾವಣಾ ಪ್ರಚಾರ ಸಭೆಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮನ್ನು ಅಧಿಕೃತವಾಗಿ ಕಾಂಗ್ರೇಸ್ ಪಕ್ಷ ಸೇರ್ಪಡೆಯ ಕುರಿತು ಪ್ರಕಟಿಸಿದ್ದರು.

 

ಕಾಂಗ್ರೆಸ್  ಪಕ್ಷದ ರಾಜ್ಯ ಮತ್ತು ಜಿಲ್ಲೆಯ ಹಿರಿಯ ಮುಖಂಡರುಗಳು ಮತ್ತು ಪದಾಧಿಕಾರಿಳು ಭಾಗವಹಿಸಲಿರುವ ಈ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿ ಪಕ್ಷ ಸೇರ್ಪಡೆಗೆ ಸಹಮತ ಹೊಂದಿರುವ ತಮ್ಮ ರಾಜಕೀಯ ಹೋರಾಟವನ್ನು ಬೆಂಬಲಿಸುತ್ತ ಬಂದಿರುವ ಹಿತೈಸಿಗಳು, ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಬೇಕೆಂದು ಅವರಲ್ಲಿ ಕೋರಿದ್ದಾರೆ.

 

ಈ ಸಂದರ್ಭದಲ್ಲಿ ರಮೇಶ ಉಟಗಿ, ಸುರೇಶ ಮರಲಿಂಗನ್ನವರ, ಸುಭಾನಿ ಹವಾಲ್ದಾರ ವಕೀಲರು, ಲಕ್ಷ್ಮಣ ಕರಮೋಶಿ, ಕಾಡಪ್ಪ ಪಾಟೀಲ, ಅಡಿವೆಪ್ಪ ಕುಂದರಗಿ, ಸಿದ್ದಪ್ಪ ಶಿರಸಂಗಿ, ಉದಯ ಮಿಡಕನಟ್ಟಿ, ಚನಗೌಡ ಮರಲಿಂಗಣ್ಣವರ  ಹಾಗೂ ಇತರರು ಇದ್ದರು.