Belagavi News In Kannada | News Belgaum

ಅಧಿವೇಶನಕ್ಕೆ ಬರುವ ವೇಳೆ ಮಾರ್ಗ ಮಧ್ಯೆ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಸೋಮವಾರ ಪರಿಶೀಲಿಸಿದರು.

ಗೋಕಾಕ್ : ಬೆಳಗಾವಿಯ ಸುವರ್ಣಸೌಧದ ಅಧಿವೇಶನಕ್ಕೆ ಬರುವ ವೇಳೆ ಮಾರ್ಗ ಮಧ್ಯೆ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಸೋಮವಾರ ಪರಿಶೀಲಿಸಿದರು.

ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಾ ಬಂದಿರುವ  ಶಾಸಕ ಸತೀಶ್ ಜಾರಕಿಹೊಳಿ ಅವರು ಮತಕ್ಷೇತ್ರದಲ್ಲಿ ನಡೆದ ಕೆಲಸಗಳು ಗುಣಮಟ್ಟದಾಗಿರಬೇಕು ಎಂಬುವುದು ಅವರ ಆಶಯ. ಈ ನಿಟ್ಟಿನಲ್ಲಿ ಪ್ರತಿಯೊಂದು ಕಾಮಗಾರಿಯನ್ನ ಸ್ವತಃ ಸತೀಶ್ ಜಾರಕಿಹೊಳಿ ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಣೆ ಮಾಡುತ್ತಾರೆ.

ಗೋಕಾಕದಿಂದ ಬೆಳಗಾವಿಗೆ ತೆರಳುತ್ತಿರುವ ಸಂದರ್ಭದಲ್ಲಿ ಯಮಕನಮರಡಿ ಮತಕ್ಷೇತ್ರದ ಅರಳಿಕಟ್ಟಿ ಗ್ರಾಮದಲ್ಲಿ ನಡೆದ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ವೀಕ್ಷಿಸಿದರು. ರಸ್ತೆ ಡಾಂಬರೀಕರಣ ಕಾಮಗಾರಿ ಗುಣಮಟ್ಟದಾಗಿರಲಿ ಎಂದು ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ರಸ್ತೆ, ಶಾಲಾ ಕಟ್ಟಡ ನಿರ್ಮಾಣ, ಬ್ರಿಡ್ಜ್ ಕಾಮಗಾರಿ ಸೇರಿದಂತೆ ಕ್ಷೇತ್ರದಲ್ಲಿ ನಡೆಯುವ ಪ್ರತಿ ಕಾಮಗಾರಿ ಪರಿಶೀಲಿಸುತ್ತಾರೆ. ಅದೇ ರೀತಿ ಇಂದು ಸಹ ಅಧಿವೇಶನಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ನಡೆದ ರಸ್ತೆ ಕಾಮಗಾರಿಯ ಗುಣಮಟ್ಟ ವೀಕ್ಷಿಸಿದರು.