Belagavi News In Kannada | News Belgaum

ಬೆಳಗಾವಿ ಮಹಾಸಭೆಘಟಕಕ್ಕೆಈಶ್ವರಖಂಡ್ರೆ ಭೇಟಿ

ಬೆಳಗಾವಿ ಮಹಾಸಭೆಘಟಕಕ್ಕೆಈಶ್ವರಖಂಡ್ರೆ ಭೇಟಿ  ಅಖಿಲ ಭಾರತ ಮಹಾಸಭೆ ಸಮಾಜ ಸಂಘಟನೆಯಲ್ಲಿ ಮಹತ್ವದಕಾರ್ಯನಿರ್ವಹಿಸುತ್ತಿದೆ.ತನ್ನರಚನಾತ್ಮಕವಾದ ಸೇವೆಗಳಿಂದ ಸಮಾಜವನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿದೆಎಂದು ಶಾಸಕರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಕೇಂದ್ರಘಟಕದ ಮಹಾಪ್ರಧಾನ ಕಾರ್ಯದರ್ಶಿಗಳಾದ ಈಶ್ವರಖಂಡ್ರೆಯವರು ಹೇಳಿದರು.

ಅವರು ಬೆಳಗಾವಿಯ ಶಿವಬಸವನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದರು.ಸಮಾಜದ ಸಂಘಟನೆ ಎಷ್ಟು ಮುಖ್ಯವೋ ಅಷ್ಟೇ ಅದರ ಸಂರಕ್ಷಣೆಯು ಮುಖ್ಯ.ಇದು ಮತಾತಂತರ ಪ್ರಕ್ರಿಯೆತೀವ್ರವಾಗಿ ನಡೆಯುತ್ತಿರುವುದುಖೇದಕರ ಸಂಗತಿ.ಅದನ್ನು ಮಹಾಸಭೆತೀವ್ರವಾಗಿಖಂಡಿಸುತ್ತದೆ.ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸುವ ಕೆಲಸವು ಜರುಗಬೇಕು.ರಾಜ್ಯದ ಪ್ರತಿಜಿಲ್ಲೆಯಲ್ಲಿ ಮಹಾಸಭೆ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸುವ ಸಂಕಲ್ಪವನ್ನು ಹೊಂದಿದೆ. ಕರೊನಾ ನಿಮಿತ್ತ ಪ್ರತಿಭಾ ಪುರಸ್ಕಾರವನ್ನುತಡೆಹಿಡಿಯಲಾಗಿತ್ತು, ಅದನ್ನು ಮುಂಬರುವ ದಿನಗಳಲ್ಲಿ ನೀಡಲಿದ್ದೇವೆ.

ಬೆಳಗಾವಿ ಜಿಲ್ಲಾಘಟಕವು ಹತ್ತುಹಲವಾರುರಚನಾತ್ಮಕ ಕೆಲಸವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ.ವಿಶ್ವದಲ್ಲಿ ಶಾಂತಿ ಸಹಬಾಳ್ವೆಯ ಸಮಾನತೆಯತತ್ತ್ವವನ್ನು ನೀಡಿದವರುಗುರುಬಸವಣ್ಣನವರು.ಬಸವ ಧರ್ಮದಲ್ಲಿ ನಾವು ಮುನ್ನಡೆಯೋಣ, ಸಮಾನತೆಯ ಸಮಾಜವನ್ನುರೂಪಿಸೋಣ, ವೀರಶೈವ ಲಿಂಗಾಯತವೆಂಬ ದ್ವಂದ್ವಗಳನ್ನು ಬದಿಗೆ ಸರಿಸಿ ನಾವೆಲ್ಲರೂಒಂದಾಗಿ ಸಮಾಜವನ್ನುಕಟ್ಟುವ ಕೆಲಸ ಮಾಡೋಣವೆಂದುಕರೆನೀಡಿದರು.

ಅಧ್ಯಕ್ಷತೆಯನ್ನು ವಧುವರಣಅನ್ವೇಷಣಕೇಂದ್ರಅಧ್ಯಕ್ಷರಾದಡಾ.ಎಫ್.ವ್ಹಿ.ಮಾನ್ವಿಯವರು ವಹಿಸಿದ್ದರು. ಹಿರಿಯ ನ್ಯಾಯವಾದಿ ಎಂ.ಬಿ.ಜೀರಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಘಟಕದಉಪಾಧ್ಯಕ್ಷ ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿದರು.ಶ್ರೀಮತಿ ಜ್ಯೋತಿ ಭಾವಿಕಟ್ಟಿ ವಂದಿಸಿದರು.ಪ್ರತಿಭಾ ಕಳ್ಳಿಮಠ ನಿರೂಪಿಸಿದರು.

ಚಂದ್ರಶೇಖರ ಬೆಂಬಳಗಿ, ನ್ಯಾಯವಾದಿ ಆರ್.ಪಿ.ಪಾಟೀಲ, ವಿ.ಕೆ.ಪಾಟೀಲ, ಕಾರ್ಯದರ್ಶಿ ಎ.ಬಿ.ಕೊರಬು, ರಮೇಶ ಕಳಸಣ್ಣವರ, ಡಾ.ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಬಾದಾಮಿ ಮೊದಲ್ಗೊಂಡು ಮಹಾಸಭೆಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಾಸಭೆಯ ವತಿಯಿಂದಈಶ್ವರಖಂಡ್ರೆಯವರನ್ನು ಸತ್ಕರಿಸಲಾಯಿತು.