Belagavi News In Kannada | News Belgaum

ಎಮ್‍ಇಎಸ್ ಬ್ಯಾನ್ ಮಾಡುವಂತೆ ಮನವಿ

ಘಟಪ್ರಭಾ:   ವಿಶ್ವಗುರು ಬಸವಣ್ಣನವರ ಪ್ರತಿಮೆ ಮತ್ತು ಕಾಂತ್ರಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆಗಳನ್ನು ಭಗ್ನಗೊಳಿಸಿರುವುದಲ್ಲದೆ ಕೊಲ್ಲಾಪೂರದಲ್ಲಿ ಕನ್ನಡಧ್ವಜವನ್ನು ಸುಟ್ಟಿರುವ ನಾಡದ್ರೋಹಿ ಎಮ್‍ಇಎಸ್ ಮತ್ತು ಶಿವಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ  ಮಂಗಳವಾರ  ಘಟಪ್ರಭಾದಲ್ಲಿ ಮೃತ್ಯುಂಜಯ ಸರ್ಕಲ್‍ನಲ್ಲಿ ವಿವಿಧ ಪರಕನ್ನಡ ಸಂಘಟನೆಗಳು ರಸ್ತೆತಡೆ ನಡೆಸಿ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.

ಕನ್ನಡಪರ ಸಂಘಟನೆಯವರಿಗೆ ಬೆಂಬಲವಾಗಿ ಗುಬ್ಬಲಗುಡ್ಡಕೆಂಪಯ್ಯಸ್ವಾಮಿ ಮಠದಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಹೊಸಮಠದಶ್ರೀ ವೀರುಪಾಕ್ಷದೇವರು, ಕನ್ನಡಪರ ಸಂಘಟನೆಯ ಮುಖಂಡರಾದಕೆಂಪಣ್ಣ ಚೌಕಾಶಿ, ಪ್ರಶಾಂತ ಅರಳಿಕಟ್ಟಿ, ಸಂತೋಷಖಂಡ್ರಿ, ಡಿ.ಎಮ್.ದಳವಾಯಿ, ಅಯೂಬ ಫಿರಜಾದೆ ಸೇರಿ ಹಲವಾರು ಕಾರ್ಯಕರ್ತರು ಇದ್ದರು.