Belagavi News In Kannada | News Belgaum

ಹುಣಸಗಿ ರೈತ ಸಂಪರ್ಕ ಕೇಂದ್ರದಲ್ಲಿ ರೈತ ದಿನಾಚರಣೆ ಕಾರ್ಯಕ್ರಮ

ಹುಣಸಗಿ : ಯಾವೂದೇ ಪಕ್ಷಗಳ ಸರ್ಕಾರಗಳು ಬಂದರೂ, ಅನೇಕ ಹಂತಗಳ ಕೃಷಿಕರ ಸಂಕೀರ್ಣ ಸಮಸ್ಯೆಗಳನ್ನು ನೀಗಿಸಲು ಸಾಧ್ಯವಾಗದೇ, ಸೋಲು ಅನುಭವಿಸಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷೇ ಮಹಾದೇವಿ ಎಸ್ ಬೇವಿನಾಳ ಮಠ ಕಳವಳ ವ್ಯಕ್ತಪಡಿಸಿದರು.
ಹುಣಸಗಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿಯಲ್ಲಿನ ವಸ್ತು ಸ್ಥಿತಿ, ವಾತವರಣ, ಮಾರುಕಟ್ಟೆಯ ಸ್ಥಿತಿಗತಿ, ರಾಜಕೀಯ ನಿಲವು, ಧೋರಣೆ ಬೇರೆ ಬೇರೆಯಾಗಿವೆ. ಹಿನ್ನೆಲೆಯಲ್ಲಿ ಸಮನ್ವಯತೆ ಸಾಧಿಸಲು ಅಸಾದ್ಯವಾಗಿದ್ದು, ರೈತರ ಸಮಸ್ಯೆಗಳನ್ನು ಸ್ಪಂಧಿಸಲು ರಾಜಕೀಯ ಪಕ್ಷಗಳು ಹಿಂದು ಮುಂದು ಮಾಡುತ್ತಿವೆ. ಹೀಗಾಗಿ ಇಲ್ಲಿಯವರೆಗೂ ರೈತರ ಬದುಕು ಹಸನುಗೊಳಿಸಲು ಸಾದ್ಯವಾಗಿಲ್ಲ. ಕೃಷಿ ವಲಯದಲ್ಲಿನ ಸವಾಲುಗಳು, ಸಮಸ್ಯೆಗಳ ಪರಿಹಾರಕ್ಕಾಗಿ ರಾಜಕೀಯ ಇಚ್ಛಾಶಕ್ತಿಯಾಗಿ ಉಳಿದಿಲ್ಲ ಎಂದು ರೈತ ಮುಖಂಡ ಮಲ್ಲನಗೌಡ ನಗನೂರ್ ಹೇಳಿದರು.

 

ನಂತರ ಮಾತನಾಡಿದ ಹೆಚ್ ಆರ್ ಬಡಿಗೇರ್, ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಮೂರು ಕೃಷಿ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚೆ ಇಲ್ಲದೇ ಭೇಷರತ್ತಾಗಿ ಹಿಂಪಡೆದಿರುವುದು ಇದಕ್ಕೆ ನಿದರ್ಶನವಾಗಿದೆ. ಈ ಕೃಷಿ ಮಸೂದೆಗಳು ಕಾನೂನು ಆಗಬಾರದು ಎಂದು ರೈತರು ಇಡೀ ವರ್ಷ ದೆಹಲಿಯಲ್ಲಿ ಚಾರಿತ್ರಿಕ ಹೋರಾಟ ಮಾಡಬೇಕಾಯಿತು ಎಂದರು. ರೈತ ಸಂಘದ ಮಹಿಳಾ ಮುಖಂಡೆ ಶರಣಮ್ಮ ಬಸವರಾಜ್ ಬೂದಿಹಾಳ್ ಮಾತನಾಡಿ, ಮನುಷ್ಯ ಸತ್ತರೆ ಮಣ್ಣಿನಲ್ಲಿ ಹೂತು ಹಾಕಿದರೆ ಜೀವನ ಕೊನೆಯಾಗುತ್ತಿದೆ.

 

ಆದರೆ ಮಣ್ಣು ಸತ್ತರೆ ಮನುಕುಲವೇ ಕೊನೆಯಾಗಲಿದೆ ಎಂದ ಅವರು, ಆದಷ್ಟು ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಸಿದ್ದಾರ್ಥ್ ಪಾಟೀಲ್, ಪರಶುನಾಥ, ಸಹಾಯಕ ಕೃಷಿ ಅಧಿಕಾರಿ ದೀಪಾ ಚಂದ್ರಶೇಖರ ದೊರೆ, ಹಾಗೂ ಸಿಬ್ಬಂದಿ ವರ್ಗದವರು ಉಪ ಸ್ಥಿತರಿದ್ದರು ತಾಲ್ಲೂಕಿನ ವಿವಿಧ ಗ್ರಾಮಗಳಿಂಧ ರೈತರು ಆಗಮಿಸಿದ್ದರು. ವರದಿ ಸಿದ್ದನಗೌಡ ಎನ್ ಬಿರಾದಾರ.