Belagavi News In Kannada | News Belgaum

ಅಥಣಿ ಪುರಸಭೆ ಚುನಾವಣೆಯ ವಾರ್ಡ ನಂಬರ್ 0೨ ರಲ್ಲಿ ಚಿದಾನಂದ ಸವದಿ ಭರ್ಜರಿ ಪ್ರಚಾರ

ಅಥಣಿ : ಅಥಣಿ ಪುರಸಭೆಯ ವಾರ್ಡ್ ನಂಬರ್ 02 ರ  ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ  ಸಮಾಜ ಸೇವಕ, ಕಲಪ್ಪಾ ದತ್ತು ಮಡ್ಡಿ  ಅವರ ಅಪಾರ ಬೆಂಬಲಿಗರೊಂದಿಗೆ  ವಾರ್ಡ್ ನಲ್ಲಿ ಭರ್ಜರಿ ಪ್ರಚಾರ ನಡೆಸಿದರು
ಮಾಜಿ ಉಪಮುಖ್ಯಮಂತ್ರಿ  ಪುತ್ರ ಚಿದಾನಂದ ಸವದಿ ಅವರು ಪ್ರತಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಥಣಿ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನ ಬಿಜೆಪಿ ಪಕ್ಷದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಅವರು ಮಾಡಿದ್ದಾರೆ ಜೊತೆಗೆ ಹಿಂದೆಂದೂ ಕಾಣದ ಅಭಿವೃದ್ಧಿ ಕಾರ್ಯಗಳನ್ನ ನೋಡಿ ಅಥಣಿ ಮತದಾರರು ಬಿಜೆಪಿ ಪಕ್ಷದ 27 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಕಲಪ್ಪಾ ದತ್ತು ಮಡ್ಡಿ  ಅವರು ಅಥಣಿ ಪಟ್ಟಣದ ಅಭಿವೃದ್ಧಿ ವಾರ್ಡ್ ನಂಬರ್ 02 ರಲ್ಲಿ ಅಭಿವೃದ್ಧಿ ಮಾಡುವುದೆ ನನ್ನ ಗುರಿ  ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು. ಸರ್ಕಾರದ ಸಾಧನೆ ಸೇರಿದಂತೆ  ಅಥಣಿ ಪಟ್ಟಣದ ವಾರ್ಡ ನಂ 02 ಅಭಿವೃದ್ಧಿಗಾಗಿ  ಭಾರತೀಯ ಜನತಾ ಪಕ್ಷ ಸದಾ ಸಿದ್ದವಿದೆ  ಹೇಳಿದರು.
ಈ ಸಂಧರ್ಭದಲ್ಲಿ ಚಿದಾನಂದ ಸವದಿ,ಮಹಾತೇಶ ಬಾಡಗಿ,ಮಲ್ಲು ಸವದಿ,ರಮೇಶ ಪಟ್ಟಣ,ಅಜೀತ ತಂಗೋಳೆ,ಮಹಾಂತೇಶ ಠಕ್ಕಣ್ಣವರ,ಪ್ರದೀಪ ನಂದಗಾಂವ,ಮಹಾಂತೇಶ ಬೆಳ್ಳಂಕಿ, ಸಿದಲಿಂಗ ಮಡ್ಡಿ, ಸುದೀರ ಮಡ್ಡಿ ,ದೀಪಕ್ ನೂಲಿ,ಸಿದ್ದು ಮಡ್ಡಿ,ಅರುಣ ಸಿಂದೂರ,ಬಬನ ಜಾಧವ್, ಸಂದೀಪ್ ಘಟಕಾಂಬಳೆ,ಬಾಬು ಕಾಂಬ್ಳೆ, ಶೃತಿ ಕಿವಡಿ,ಪ್ರಿಯಾಂಕಾ ಹುಲ್ಯಾಳ,ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು