Belagavi News In Kannada | News Belgaum

ಇದೆ 27 ರಂದು ಚುನಾವಣೆ ಜರುಗಲಿರುವದರಿಂದ ಪಟ್ಟಣದ ಬಿಜೆಪಿ ಮುಖಂಡರು ವಾರ್ಡ ನಂ3

ಅಧಿಕೃತ ಅಭ್ಯರ್ಥಿ ಸುಲಭಾ ಬಾಬಾಸಾಬ ಪಾಟೀಲ ಅವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ಶೇಡಬಾಳ : ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯತಗೆ ಇದೆ 27 ರಂದು ಚುನಾವಣೆ ಜರುಗಲಿರುವದರಿಂದ ಪಟ್ಟಣದ ಬಿಜೆಪಿ ಮುಖಂಡರು ವಾರ್ಡ ನಂ3 ಅಧಿಕೃತ ಅಭ್ಯರ್ಥಿ ಸುಲಭಾ ಬಾಬಾಸಾಬ ಪಾಟೀಲ ಅವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

 

ಈ ವೇಳೆ ಮಾತನಾಡಿದ ಮುಖಂಡ ರಾಜಗೌಡ ನಾಂದ್ರೆ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಹಲವು ಬಡವರ ಪರ ಯೋಜನೆ ಜಾರಿಗೆ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿವೆ ಹಾಗೂ ಈ ಭಾಗದ ನಮ್ಮ ಶಾಸಕರಾದ ಶ್ರೀಮಂತ ಪಾಟೀಲರು ಈಗಾಗಲೇ ಶೇಡಬಾಳ ಪಟ್ಟಣಕ್ಕೆ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ ಅದೇ ರೀತಿ ಯುವ ಮುಖಂಡ ಶ್ರೀನಿವಾಸ ಪಾಟೀಲರು ಸಹಿತ ಪಟ್ಟಣದ ಯಾವುದೇ ಕೆಲಸಗಳಿದ್ದರು ಅದಕ್ಕೆ ಸ್ಪಂದಿಸಿ ಪಟ್ಟಣದ ಅಭಿವೃದ್ಧಿ ಸಹಕಾರಿಯಾಗಿದ್ದರೆ ಅವರು ಮಾಡಿರುವ ಕಾರ್ಯಗಳನ್ನು ಮೆಚ್ಚಿ ಹಾಗೂ ಹಿಂದಿನ ಅವಧಿಯಲ್ಲಿ ಆದ ಕೆಲಸಗಳನ್ನು ನೆಚ್ಚಿ ಸುಲಭಾ ಪಾಟೀಲ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ಎಲ್ಲ ವಾರ್ಡಗಳಲ್ಲಿ ಆಯ್ಕೆ ಮಾಡಿ ಬಿಜೆಪಿಗೆ ಆಡಳಿತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಇದೇ ವೇಳೆ ಮಾತನಾಡಿದ ವಾರ್ಡನ ಮಹಿಳೆ ಪಲ್ಲವಿ ನರಸಗೌಡರ ಮಾತನಾಡಿ ನಮ್ಮ ಸ್ವ ಇಚ್ಛೆಯಿಂದ ಸುಲಭಾ ಬಾಬಾಸಾಬ ಪಾಟೀಲ ಅವರನ್ನು ಆಯ್ಕೆ ಮಾಡುವ ಉದ್ದೇಶದಿಂದ ಅವರ ಪ್ರಚಾರ ಮಾಡುತ್ತಿದ್ದ ಪಟ್ಟಣ ಹಾಗೂ ವಾರ್ಡಗಳ ಸುಧಾರಣೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ವಿಶೇಷ ಸೌಲಭ್ಯಕ್ಕಾಗಿ ವಾರ್ಡನ ಮಹಿಳೆಯರು ಸೇರಿ ಇವರನ್ನು ಆಯ್ಕೆ ಮಾಡಲಿದ್ದೆವೆ ಎಂದು ಹೇಳಿದರು.
ಈ ವೇಳೆ ಪಟ್ಟಣದ ಬಿಜೆಪಿ ಮುಖಂಡ ಹಾಗೂ ಕಾರ್ಯಕರ್ತರು ಮತ್ತು ನೂರಾರು ಮಹಿಳೆಯರು ಉಪಸ್ಥಿತರಿದ್ದರು.