Belagavi News In Kannada | News Belgaum

ಉಚಿತ ಆರೋಗ್ಯ ಶಿಬಿರ ಬಡವರಿಗೆ ವರದಾನ : ಪಿಡಿಒ ವಂಟಗೂಡೆ

ಕಾಗವಾಡ : ಉಚಿತ ಆರೋಗ್ಯ ಶಿಬಿರವು ಬಡವರಿಗೆ ವರದಾನವಾಗಿವೆ ಎಂದು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಯಶವಂತ ವಂಟಗೂಡೆ ಹೇಳಿದರು.

ತಾಲೂಕಿನ ಕುಸನಾಳ ಗ್ರಾಮ ಪಂಚಾಯತಿ ಆವರಣದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಐಇಸಿ ಚಟುವಟಿಕೆಯಡಿ  ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ  ಉಚಿತ ಆರೋಗ್ಯ ಶಿಬಿರ ಚಾಲನೆ ನೀಡಿ ಅವರು ಮಾತನಾಡಿದರು.

ಮನರೇಗಾ ಕೂಲಿಕಾರರಿಗೆ ಉದ್ಯೋಗ ಒದಗಿಸುವುದಲ್ಲದೇ ಆರೋಗ್ಯಕ್ಕೂ ಹೆಚ್ಚಿನ ಮಹತ್ವ ನೀಡುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿವಹಿಸದಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ‌. ಪ್ರತಿಯೊಬ್ಬರು ಆರೋಗ್ಯದ ಕಾಳಜಿವಹಿಸುವಂತೆ ಸಲಹೆ ನೀಡಿದರು.

ಬಿಪಿ, ಶುಗರ, ಟಿಬಿ, ರಕ್ತ,  ಎಚ್ ಐವಿ, ಸಾಮಾನ್ಯರೋಗ ತಪಾಸಣೆ ಮಾಡಲಾಯಿತು. ಕುಸನಾಳ ಹಾಗೂ ಮಳವಾಡ ಗ್ರಾಮದ ನೂರಾರು   ಕೂಲಿಕಾರರು ಆರೋಗ್ಯ ಶಿಬಿರ ಸದುಪಯೋಗ ಪಡೆದುಕೊಂಡರು.

ಕಾಗವಾಡ ಸಮುದಾಯ ಕೇಂದ್ರದ ವೈದ್ಯ  ಸೂರಜ್ ಹೊನಕಾಂಬಳೆ, ಗ್ರಾಪಂ ಸಿಬ್ಬಂದಿಗಳು, ಅಧ್ಯಕ್ಷರು, ಸದಸ್ಯರು,  ಐ.ಇ.ಸಿ ಸಂಯೋಜಕರು, ಗ್ರಾಪಂ ಆರೋಗ್ಯ ಅಮೃತ ಅಭಿಯಾನ ತಾಲೂಕು ಸಂಯೋಜಕರು ಇದ್ದರು./////