Belagavi News In Kannada | News Belgaum

ಉಚಿತ ಊಟ, ಆಲ್ಕೋಹಾಲ್ ನೀಡದ್ದಕ್ಕೆ ಹೊಟೇಲ್ ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿದ ಪೊಲೀಸ್

ಮುಂಬೈ : ಉಚಿತವಾಗಿ ಊಟ ನೀಡಲು ನಿರಾಕರಿಸಿದ ಆರೋಪದ ಮೇಲೆ ಹೋಟೆಲ್ ಕ್ಯಾಪಿಯರ್ ಮೇಲೆ ಸಹಾಯಕ ಪೊಲೀಸ್ ಇನ್ಸಪೆಕ್ಟರ್ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಹಾರಾಷ್ಟ್ರದ ವಕೋಲಾ ಪೊಲೀಸ್ ಠಾಣೆಯ ಎಪಿಐ ವಿಕ್ರಮ್ ಪಾಟೀಲ್ ವಕೋಲಾ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಸ್ವಾಗತ್ ಡೈನಿಂಗ್ ಬಾರ್‌ಗೆ ಆಲ್ಕೋಹಾಲ್ ಮತ್ತು ಆಹಾರಕ್ಕಾಗಿ ಫೋನ್ ಮಾಡಿದ್ದರು. ಆದರೆ, ಈಗಾಗಲೇ ಅಡುಗೆ ಕೋಣೆಯನ್ನು ಮುಚ್ಚಲಾಗಿದೆ ಎಂದು ಕ್ಯಾಷಿಯರ್ ರಾಮದಾಸ್ ಪಾಟೀಲ್ ತಿಳಿಸಿದ್ದರು.

ಹೀಗಾಗಿ, ಮಧ್ಯರಾತ್ರಿ 12.30ಕ್ಕೆ ಮುಂಬೈನ ಬಾರ್​ಗೆ ಹೋದ ಆತ ಉಚಿತವಾಗಿ ಊಟ, ಮದ್ಯ ಕೊಟ್ಟಿಲ್ಲ ಎಂದು ಬಾರ್ ಕ್ಯಾಷಿಯರ್​ಗೆ ಹೊಡೆದಿದ್ದಾರೆ. ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ರಮ್ ಪಾಟೀಲ್ ಹಿಂಬಾಗಿಲಿನಿಂದ ಹೊಟೇಲ್‌ಗೆ ನುಗ್ಗಿ ದಬ್ಬಾಳಿಕೆ ನಡೆಸಿದ್ದಾರೆ.

ವಿಡಿಯೋ ತುಣುಕಿನಲ್ಲಿ ಅವನು ಕ್ಯಾಷಿಯರ್‌ನ ಶರ್ಟ್ ಅನ್ನು ಎಳೆದುಕೊಂಡು ಅನೇಕ ಬಾರಿ ಕಪಾಳಕ್ಕೆ ಹೊಡೆದಿರುವುದನ್ನು ನೋಡಬಹುದು. ಆದರೆ, ಹೋಟೆಲ್ ಸಿಬ್ಬಂದಿ ಅವನನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೂ ಸುಮ್ಮನಾಗದ ಪೊಲೀಸ್ ಕ್ಯಾಷಿಯರ್ ಕೆನ್ನೆಗೆ ಮತ್ತೆ ಹೊಡೆದಿದ್ದಾರೆ./////