Belagavi News In Kannada | News Belgaum

ಬಿಗ್ ಶಾಕ್: ಭಾರತದಲ್ಲಿಂದು ಓಮಿಕ್ರಾನ್ ರೌದ್ರನರ್ತನ; ಸೋಂಕಿತ ಸಂಖ್ಯೆ 358ಕ್ಕೆ ಏರಿಕೆ..!

ನವದೆಹಲಿ: ರೂಪಾಂತರಿ ಓಮಿಕ್ರಾನ್ ನಿತ್ಯದ ಪ್ರಕರಣ ಏರಿಕೆಯಲ್ಲಿದ್ದು, ಇಂದು ಪತ್ತೆ 122 ಕೇಸ್ ಪತ್ತೆಯಾಗುವ ಸ್ಪೋಟ್ ಗೊಂಡಿದೆ. ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 358ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಮಾಹಿತಿ ನೀಡಿದೆ.

ಈ ಸೋಂಕಿತರ ಪೈಕಿ 114 ಮಂದಿ ಗುಣಮುಖರಾಗಿದ್ದಾರೆ. ಇಲ್ಲವೆ ವಲಸೆ ಹೋಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 358 ಓಮಿಕ್ರಾನ್ ಪ್ರಕರಣಗಳು ಕಂಡುಬಂದಿವೆ. ಮಹಾರಾಷ್ಟ್ರವು ಅತ್ಯಕ (88) ಪ್ರಕರಣಗಳನ್ನು ದಾಖಲಿಸಿದ್ದರೆ, ನಂತರದ ಸ್ಥಾನಗಳಲ್ಲಿ ದೆಹಲಿ (67), ತೆಲಂಗಾಣ (38), ತಮಿಳುನಾಡು (34), ಕರ್ನಾಟಕ (31) ಮತ್ತು ಗುಜರಾತ್ (30) ರಾಜ್ಯಗಳಿವೆ.

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 6650 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ತನ್ಮೂಲಕ ಒಟ್ಟಾರೆ ಕೋವಿಡ್-19 ಪ್ರಕರಣಗಳು 3,47,72,626ಕ್ಕೆ ತಲುಪಿವೆ. ಸಕ್ರಿಯ ಪ್ರಕರಣಗಳು 77,516ಕ್ಕೆ ಇಳಿದಿವೆ. ದೈನಿಕ ಮರಣ ಪ್ರಕರಣಗಳು ನಿನ್ನೆ 374 ಜನರ ಮರಣದೊಂದಿಗೆ 4,79,133ಕ್ಕೆ ತಲುಪಿವೆ.

ಕೊರೊನಾ ವೈರಸ್ ಸೋಮಕಿನ ದೈನಿಕ ಏರಿಕೆ ಪ್ರಮಾಣ ಕಳೆದ 57 ದಿನಗಳಿಂದ 15,000ಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಇಂದು ಬೆಳಗ್ಗೆ 8 ಗಂಟೆಗೆ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ತಿಳಿಸಿವೆ.//////