Belagavi News In Kannada | News Belgaum

ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ

ಗೋಕಾಕ : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಅರಭಾವಿ ಶಾಸಕರ ಗೃಹ ಕಛೇರಿಯಲ್ಲಿ ಶನಿವಾರದಂದು ಸರಳವಾಗಿ ಆಚರಿಸಲಾಯಿತು.

ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಭಾರತ ಕಂಡ  ಪ್ರಧಾನಿಗಳಲ್ಲಿ ವಾಜಪೇಯಿ ಅವರು ಅತ್ಯುತ್ತಮವಾಗಿದ್ದರು. ಇವರ ಆಡಳಿತದಲ್ಲಿ ದಕ್ಷ, ಪ್ರಾಮಾಣಿಕತೆ ಜೊತೆಗೆ ಇಡೀ ಜಗತ್ತೇ ಮೆಚ್ಚುವ ಆಡಳಿತ ನೀಡಿದ್ದರು ಎಂದು ಹೇಳಿದರು.

ಬಿಜೆಪಿ ಮುಖಂಡರಾದ ನಿಂಗಪ್ಪ ಕುರಬೇಟ, ಲಕ್ಕಪ್ಪ ಲೋಕುರಿ, ಅಬ್ದುಲ್ ಮಿರ್ಜಾನಾಯ್ಕ, ಗುತ್ತಿಗೆದಾರ ಮಹಾದೇವ ಹಾರೂಗೇರಿ, ಮಾರುತಿ ಸರ್ವಿ, ಅಶೋಕ ಸರ್ವಿ, ಫಕೀರಪ್ಪ ಮಲ್ದೂರ, ಕಾಶೀಂ ಫಿರಜಾದೆ, ರಮೇಶ ಸಂಪಗಾಂವಿ, ಅಡಿವೆಪ್ಪ ಕಂಕಾಳಿ, ಅಸ್ಲಂ ಶೇಖ, ಬಿಜೆಪಿ ಪದಾಧಿಕಾರಿಗಳು ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು./////