Belagavi News In Kannada | News Belgaum

ಅಥಣಿ ಪುರಸಭೆ ವಾರ್ಡ್ ನಂಬರ್ 1 ರಲ್ಲಿ ಬಿಬಿಜಾನ್ ಬಸೀರ್ ತಾಂಬೊಳಿ ಪ್ರಚಾರ

ಅಥಣಿ: ಅಥಣಿ ಪಟ್ಟಣದ ಪುರಸಭೆ ಚುನಾವಣೆಯ ವಾರ್ಡ ನಂಬರ್ ಒಂದರಲ್ಲಿ ಬಿಜೆಪಿ ಅಭ್ಯರ್ಥಿ ಬಿಬಿಜಾನ್ ಬಸೀರ ತಾಂಬೋಳಿ ಪರವಾಗಿ ಬಿಜೆಪಿ ಚಿಕ್ಕೋಡಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ತೊದಲಬಾಗಿ ಮತಯಾಚಿಸಿದರು..
ಬಿಬಿಜಾನ ಬಷೀರ್ ತಾಂಬೋಳಿ ಇವರು ಬಿಜೆಪಿ ಅಭ್ಯರ್ಥಿಯಾಗಿ  ಕಣಕ್ಕಿಳಿದಿದ್ದು 1 ನೇ ವಾರ್ಡ್ ನಿಂದ  ಸ್ಪರ್ಧೆಗೆ ಇಳಿದಿದ್ದಾರೆ. ಈ ವೇಳೆ ಜನರಿಂದ ಭಾರೀ ಬೆಂಬಲ ವ್ಯಕ್ತವಾಗಿದ್ದು
ಇದೇ ವೇಳೆ ಶಿಲ್ಪಾ ತೊದಲಬಾಗಿ  ಮಾಧ್ಯಮದೊಂದಿಗೆ ಮಾತನಾಡಿ, ಅಥಣಿ ಪಟ್ಟಣವನ್ನು ಹಾಗೂ ನಮ್ಮ ವಾರ್ಡುಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಪ್ರಮಾಣಿಕ ಕೆಲಸ ಮಾಡುವ ಅಬ್ಯರ್ಥಿಗಳನ್ನು ಬಿಜೆಪಿ ಕಣಕಗಕೆ ಇಳಿಸಿದ್ದು .ಬಿಜೆಪಿ ಸರ್ಕಾರದ ಜನಪರ ಸೇವೆ ಮತ್ತು ಜನಸೇವೆಯ ಆಕಾಂಕ್ಷಿ ಬೇಬಿಜಾನ್ ಬಷೀರ್ ತಾಂಬೊಳಿ ಅವರ ಕಮಲದ ಗುರುತಿಗೆ ಮತ ನೀಡಿ  1ನೇ ವಾರ್ಡಿನಲ್ಲಿ ನಮ್ಮನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಬೇಬಿಜಾನ ತಾಂಬೊಳಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಹಾಲಿ ಶಾಸಕ ಮಹೇಶ್ ಕುಮಠಳ್ಳಿ ಅವರು ತಾಲೂಕಿನಲ್ಲಿ ಬಡವರು,ದೀನದಲಿತರ ಪರವಾಗಿ ಕೆಲಸ ಮಾಡುತ್ತ ನೊಂದವರ ಕಣ್ಣೀರು ಒರೆಸುತ್ತಿದ್ದು ಜನಸೇವೆಯೆ ಜನಾರ್ಧನ ಸೇವೆ ಎಂದು ಭಾವಿಸಿದ್ದು ವಾರ್ಡ್ ನಂಬರ ಒಂದರ ಸಮಗ್ರ ಅಭಿವೃದ್ಧಿಗೆ ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು ಈ ವೇಳೆ
ಆಶಿಪ್ ತಾಂಬೊಳಿ,ರಾಕೇಶ್ ಬಾಳಿಕಾಯಿ, ದಾನಮ್ಮ ಚರಂತಿಮಠ,ವನಿತಾ ಕೊಕಾಟೆ,ವಂದನಾ ಘೋಟಕಿಂಡಿ,ಸವಿತಾ ಬಕಾರಿ,ದ್ರಾಕ್ಷಾಯಿಣಿ ಡುಮ್ಮನವರ,ಶೋಭಾ ಔರಸಂಗ,ಶಿವಲೀಲಾ ಪಟ್ಟಣಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.//////