Belagavi News In Kannada | News Belgaum

ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕೃಷಿಕೇಶ್ ದೇಸಾಯಿ ಆಯ್ಕೆ

ಬೆಳಗಾವಿ  : ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಪ್ರತಿವರ್ಷ  ಕೊಡುವ ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿಗೆ ದಿ ಹಿಂದು ಪತ್ರಿಕೆ ಹಿರಿಯ ವರದಿಗಾರರಾದ  ಹೃಷಿಕೇಶ್ ಬಹದ್ದೂರ್ ದೇಸಾಯಿ ಹಾಗೂ  ಜಿ.ನಾರಾಯಣ ಸ್ವಾಮಿ (ಗ್ರಾಮೀಣ ವರದಿ) ಪ್ರಶಸ್ತಿಗೆ ಬೈಲಹೊಂಗಲದ ಈಶ್ವರ ಹೋಟಿ ಅವರು ಆಯ್ಕೆಯಾಗಿದ್ದಾರೆ.

1932 ರಲ್ಲಿ ಡಿ.ವಿ.ಗುಂಡಪ್ಪ (ಡಿವಿಜಿ) ಹುಟ್ಟು ಹಾಕಿದ ಸಂಘಟನೆ ನಾಡಿನ ಉದ್ದಗಲಕ್ಕೂ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಘಟಕಗಳನ್ನು ಹೊಂದಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು  ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿದೆ.

ಕರಾವಳಿ ತೀರದ ಮಂಗಳೂರು ಸಮ್ಮೇಳನದ ಬಳಿಕ 36 ನೇ ರಾಜ್ಯ ಸಮ್ಮೇಳನ ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೀಡು ಕಲಬುರಗಿಯಲ್ಲಿ 2022 ಜನವರಿ 3&4 ರಂದು ನಡೆಯಲಿದೆ.  ಜ.4 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ../////