Belagavi News In Kannada | News Belgaum

ಡಿ.31ಕ್ಕೆ ಕರ್ನಾಟಕ ಬಂದ್ ಬೇಸರದ ವಿಚಾರ : ನಟ ಶಿವರಾಜ್ ಕುಮಾರ್

ಮೈಸೂರು : ಡಿಸೆಂಬರ್  31ರಂದು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆ ದಿನ ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ಬೇಸರದ ವಿಚಾರ ಎಂದು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಸಮಾಧಾನ ವ್ಯಕ್ತ ಪಡಿಸಿದರು.

ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಬಡವ ರಾಸ್ಕಲ್ ಸಿನಿಮಾ ವೀಕ್ಷಣೆ  ಬಳಿಕ ಮಾತನಾಡಿ, ನಾವು ಯಾವಾಗಲೂ ಕನ್ನಡದ ಪರ. ಹೋರಾಟ ಉತ್ತಮ ರೀತಿಯಲ್ಲಿ ಆಗಬೇಕೆಂಬುದು ನಮ್ಮ ಉದ್ದೇಶ. ಆದರೆ ,ಡಿ 31 ಕ್ಕೆ ಬಂದ್​ಗೆ ಕರೆ ನೀಡಿರೋದು ನಿಜಕ್ಕೂ ಬೇಸರದ ವಿಚಾರ. ಆ  ದಿನ ಮೂರು ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇಂತಹ ವೇಳೆಯಲ್ಲಿ ಬಂದ್​ಗೆ ಕರೆ ನೀಡಿರುವುದು ಕನ್ನಡಕ್ಕೆ ದ್ರೋಹ ಮಾಡಿದ ಹಾಗೆ ಎಂದರು.

ಸಿನಿಮಾ ಬಗ್ಗೆ ಮಾತನಾಡಿದ ಶಿವಣ್ಣ ಬಡವ ರಾಸ್ಕಲ್ ಸಿನಿಮಾದಲ್ಲಿ ಧನಂಜಯ್ ಉತ್ತಮವಾಗಿ ನಟಿಸಿದ್ದಾರೆ. ನನಗೆ ಧನಂಜಯ್ ಪರ್ಫಾಮೆನ್ಸ್ ತುಂಬಾ ಇಷ್ಟ ಆಯ್ತು. ಫಸ್ಟ್ ಪ್ರೊಡಕ್ಷನ್​ನಲ್ಲಿ ಧನಂಜಯ್ ಅದ್ಧೂರಿಯಾಗಿ ಮಾಡಿದ್ದಾರೆ. ಒಂದು ಸಣ್ಣ ವಿಷಯವನ್ನು ವಿಭಿನ್ನವಾಗಿ, ಹಾಸ್ಯ, ಕ್ಯೂರಿಯಾಸಿಟಿ ಮೂಲಕ ಹೇಳಲು ಹೊರಟಿದ್ದಾರೆ. ಶಂಕರ್ ಗುರು ಉತ್ತಮ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ಜೀವ ತುಂಬಿದ್ದಾರೆ ಎಂದು ಹೇಳಿದರು.//////