Belagavi News In Kannada | News Belgaum

ಅಥಣಿ ಪುರಸಭೆ ಚುನಾವಣೆ: ವಾರ್ಡ ನಂಬರ್ 03 ಮತ್ತು 11ರಲ್ಲಿ ಚಿದಾನಂದ ಸವದಿ  ಭರ್ಜರಿ ಪ್ರಚಾರ

ಅಥಣಿ: ಪುರಸಭೆಯ ವಾರ್ಡ್ ನಂಬರ್ 03 ರ  ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ  ಸಮಾಜ ಸೇವಕ, ಸಂತೋಷ ಸಾವಡಕರ ಹಾಗೂ ವಾರ್ಡ ನಂಬರ್ 11ರ ಅಭ್ಯರ್ಥಿ ಮುತ್ತಪ್ಪ ಕಾಂಬಳೆ ಅವರು ಅಪಾರ ಬೆಂಬಲಿಗರೊಂದಿಗೆ ವಾರ್ಡ್ ನಂಬರ ಮೂರರಲ್ಲಿ ಹನೊಂದು ರಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಈ ವೇಳೆ ಮಾಜಿ ಉಪಮುಖ್ಯಮಂತ್ರಿ  ಪುತ್ರ ಚಿದಾನಂದ ಸವದಿ ಅವರು ಪ್ರತಿ ಮನೆ-ಮನೆಗೆ ತೆರಳಿ ಬಿಜೆಪಿ ಸರ್ಕಾರದ ಅಭಿವೃದ್ಧಿಯ ಬಗ್ಗೆ  ಜನರಿಗೆ ತಿಳಿಸುತ್ತ ಮತಯಾಚನೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಥಣಿ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನ ಬಿಜೆಪಿ ಪಕ್ಷದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ್ ಕುಮಠಳ್ಳಿ ಅವರು ಮಾಡಿದ್ದಾರೆ ಜೊತೆಗೆ ಹಿಂದೆಂದೂ ಕಾಣದ ಅಭಿವೃದ್ಧಿ ಕಾರ್ಯಗಳನ್ನ ನೋಡಿ ಅಥಣಿ ಮತದಾರರು ಬಿಜೆಪಿ ಪಕ್ಷದ 27 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಈ ವೇಳೆ ಮಾತನಾಡಿದ ವಾರ್ಡ ನಂಬರ್ ಮೂರರ ಅಭ್ಯರ್ಥಿ ಸಂತೋಷ ಸಾವಡಕರ  ಅವರು ಅಥಣಿ ಪಟ್ಟಣದ ಅಭಿವೃದ್ಧಿ ವಾರ್ಡ್ ನಂಬರ್ 03 ರಲ್ಲಿ ಅಭಿವೃದ್ಧಿ ಮಾಡುವುದೆ ನನ್ನ ಗುರಿ  ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು. ಸರ್ಕಾರದ ಸಾಧನೆ ಸೇರಿದಂತೆ  ಅಥಣಿ ಪಟ್ಟಣದ ವಾರ್ಡ ನಂ 03 ಅಭಿವೃದ್ಧಿಗಾಗಿ  ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನಾನು ಸದಾಕಾಲ ಜನಸೇವೆಗೆ ಸಿದ್ದನಿದ್ದೇನೆ ಎಂದು ಹೇಳಿದರು.
“ಈ ಸಂಧರ್ಭದಲ್ಲಿ ಚಿದಾನಂದ ಸವದಿ, ಅವರ ಮೂವತ್ತಾರನೆಯ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸಾರ್ವಜನಿಕರು ಮತ್ತು ಚಿದಾನಂದ ಸವದಿ ಅಭಿಮಾನಿಗಳು ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಚಿದಾನಂದ ಸವದಿ ಅಥಣಿ ಮತಕ್ಷೇತ್ರದ ಜನರು ನಮ್ಮ ತಂದೆಯವರನ್ನು ಮೂರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದರು. ಜನಾಶಿರ್ವಾದದಿಂದ ಅವರು ಉಪಮುಖ್ಯಮಂತ್ರಿ ಆದರು ಇಂದು ಜನರು ಅದೇ ಪ್ರಿತಿ ವಿಶ್ವಾಸಗಳಿಂದ ನನ್ನ ಹುಟ್ಟು ಹಬ್ಬ ಆಚರಿಸಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ ಎಂದರು”
ಈ ವೇಳೆ ವಿಶಾಲ ಸಗರಿ, ಮಲ್ಲು ಸವದಿ, ಮಹಾಂತೇಶ ಠಕ್ಕಣ್ಣವರ, ವಿನೋದ ಸಾವಡಕರ, ಚನ್ನಪ್ಪ ಬಡಿಗೇರ, ಸಾಂತಯ್ಯ ಮಠಪತಿ, ಅಣ್ಣಾಪ್ಪ ಕೊಳಲಗಿ, ಅಬಯ್ಯ ಸಗರಿ, ಜಯಶ್ರೀ ಪೂಜಾರಿ, ಕವಿತಾ ಸಾವಡಕರ, ಶೈಲಜಾ ಸಾವಡಕರ, ಹೇಮಾ ಸಗರಿ, ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.