Belagavi News In Kannada | News Belgaum

ವಾರ್ಡ ಅಭಿವೃದ್ದಿಯೇ ನನ್ನ ಮೊದಲ ಗುರಿ ಶಾಂತಾ ಲೋಣಾರೆ.

ಅಥಣಿ ಪುರಸಭೆ ಚುನಾವಣೆಯಲ್ಲಿ ವಾರ್ಡ್ ನಂಬರ್ ಎಂಟರಲ್ಲಿ ಭರ್ಜರಿ ಪ್ರಚಾರ ನಡೆಸಿದ ಪಕ್ಷೇತರ ಅಭ್ಯರ್ಥಿ ಶಾಂತಾ ದಿಲೀಪ ಲೋಣಾರೆ ಮಾತನಾಡಿ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ತಮ್ಮ ಟ್ರಾಕ್ಟರ್ ಗುರುತಿಗೆ ಮತದಾರರು ಅಮೂಲ್ಯವಾದ ಮತ ನೀಡಿ ಪುರಸಭೆ ಸದಸ್ಯರಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ವಾರ್ಡ್ ನಂಬರ್ ಎಂಟರಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳ ಜೊತೆಗೆ ರಸ್ತೆ,ಚರಂಡಿ,ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ ಸೇರಿದಂತೆ ಜನಹಿತಕ್ಕಾಗಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ ವಾರ್ಡ ನಂಬರ್ ಎಂಟರ ಅಭಿವೃದ್ಧಿಯೇ ನನ್ನ ಮೂಲ ಗುರಿ ಎಂದರು.ಈ ವೇಳೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು