Belagavi News In Kannada | News Belgaum

ಪಕ್ಷೇತರ ಅಭ್ಯರ್ಥಿ ಗೌತಮ ಪರಾಂಜೆಪೆ  ಮತಯಾಚನೆ

ಅಥಣಿ: ಪಟ್ಟಣದ  ವಾರ್ಡ್ ನಂಬರ್ 02 ರಲ್ಲಿ ಪಕ್ಷೇತರ  ಅಭ್ಯರ್ಥಿ ಗೌತಮ ಪರಾಂಜೆಪೆ ಮೂರನೆಯ ದಿನ ನೂರಾರು ಬೆಂಬಲಗರಿಂದ ಮತಯಾಚನೆ ಮಾಡಿದರು. ವಾರ್ಡ್ ನಂಬರ್ 02 ರಲ್ಲಿ ಪ್ರತಿ ಮತದಾರರ ಮನೆ ಮನೆಗೆ  ತೆರಳಿ ಪಕ್ಷೇತರ  ಅಭ್ಯರ್ಥಿಯ ಗರ್ತು ರಿಕ್ಷಾ
ಗುರುತಿಗೆ ತಮ್ಮ ಅಮೂಲ್ಯವಾದ ಮತನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು
ಈ ವೇಳೆ ಮಾತನಾಡಿದ  ಗೌತಮ ಪರಾಂಜೆಪೆ  ಮಾತನಾಡಿ ಸಮಾಜ ಸೇವೆ ಮತ್ತು ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಹಾಗೂ ವಾರ್ಡ್ ನಂಬರ 02 ರಲ್ಲಿ ಬೀದಿ ದೀಪ,ಚರಂಡಿ,ಸಾರ್ವಜನಿಕ ಶೌಚಾಲಯ,ರಸ್ತೆ ಮತ್ತು ಸ್ವಚ್ಚತೆ ಸೇರಿದಂತೆ ಜನಪರ ಸೇವೆಗಳನ್ನು ಒದಗಿಸಲು ಅವಕಾಶ ಮಾಡಿ ಕೊಡಬೇಕು ಎಂದುರು . ಜನಾಶಿರ್ವಾದದಿಂದ ಪಕ್ಷೇತರ  ಅಭ್ಯರ್ಥಿಯ ರಿಕ್ಷಾ ಗುರುತಿಗೆ ಮತಚಲಾವಣೆ ಆದಲ್ಲಿ ವಾರ್ಡ ನಂಬರ 02 ಅಭಿವೃದ್ಧಿಗೆ ಹಗಲಿರುಳು ಶ್ರಮಿಸಲಿದ್ದೇನೆ ಎಂದರು ಹೇಳಿದರು.
ಈ ವೇಳೆ ಮಹಾತೇಶ ಪರಾಂಜೆಪೆ,ಸಚೀನ ಪರಾಂಜೆಪೆ,ಮಂಜು ನೂಲಿ, ಶಿವರಾಜ ಜಿರಗ್ಯಾಳ,ಸುಕಮಾರ ಕಾಂಬಳೆ,ಮಹಾತೇಶ ಘಟಕಾಂಬಳೆ,ಸುದಾಕರ ಬೆಳ್ಳಕ್ಕಿ, ಮಹಾತೇಶ ಬೆಳ್ಳಕ್ಕಿ, ಅವಿನಾಶ ಬೆಳ್ಳಕ್ಕಿ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು