Belagavi News In Kannada | News Belgaum

ಅಥಣಿ ಪುರಸಭೆ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧೆ ಮಾಡಿ ಎಲ್ಲರ ಗಮನ ಸೆಳೆದ ಭೀಮು ಗಾಡಿವಡ್ಡರ

ಅಥಣಿ: ಅಥಣಿ ಪಟ್ಟಣದ ಪುರಸಭೆ ಚುನಾವಣೆಯ 10 ವಾರ್ಡಗಳಿಗೆ ಚುನಾವಣೆ ಘೋಷಣೆಯಾಗಿದೆ ಇದರೊಂದಿಗೆ ಭೀಮು ಗಡಿವಡ್ಡರ ಸ್ಪರ್ಧೆ ಮಾಡಿ ಎಲ್ಲರ ಗಮನ ಸೆಳೆದು  ಪ್ರಚಾರ ಕೈಗೊಂಡಿದ್ದಾರೆ.
ಭಿಮು ಗಾಡಿವಡ್ಡರ ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ 10 ನೇ ವಾರ್ಡ್ ನಿಂದ  ಸ್ಪರ್ಧೆಗೆ ಇಳಿದಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ.
ಇದೇ ವೇಳೆ ಅಭ್ಯರ್ಥಿಯಾದ  ಭೀಮು ಗಾಡಿವಡ್ಡರ ಮಾಧ್ಯಮದೊಂದಿಗೆ ಮಾತನಾಡಿ, ಅಥಣಿ ಪಟ್ಟಣವನ್ನು ಹಾಗೂ ನಮ್ಮ ವಾರ್ಡುಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಪ್ರಮಾಣಿಕ ಕೆಲಸ ಮಾಡುತ್ತೇನೆ. 10  ನೇ ವಾರ್ಡಿನಲ್ಲಿ ನಮ್ಮನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಸಲ್ಲಿಸಿದರು. ಹಾಗೂ ಕಳೆದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಇರುವುದಕ್ಕೆ ಇಲ್ಲಿನ ಸ್ಥಳೀಯರು ರೋಸಿಹೋಗಿದ್ದಾರೆ. ಇದರಿಂದ ಸ್ಥಳೀಯರು ಸ್ವತಂತ್ರ ಅಭ್ಯರ್ಥಿಗೆ ಬೆಂಬಲವನ್ನು ಸೂಚಿಸಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಶಾಮರಾವ ಗಾಡಿವಡ್ಡರ, ದುರ್ಗಪ್ಪಾ ಗಾಡಿವಡ್ಡರ, ಬಾಳು ಗಾಡಿವಡ್ಡರ, ವಿಶಾಲ ಗಾಡಿವಡ್ಡರ, ತಿಪ್ಪಣ್ಣಾ ಗೋಲರ,ಲಕ್ಷ್ಮಣ ಗೋಲರ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು