Belagavi News In Kannada | News Belgaum

ಕ್ರಿಸ್ ಮಸ್ ಹಬ್ಬದಂದು ಕೇಕ್ ಕತ್ತರಿಸುವ ವಿಚಾರಕ್ಕೆ ಯುವಕರ ಮಧ್ಯೆ ಗಲಾಟೆ : ಕೊಲೆಯಲ್ಲಿ ಅಂತ್ಯ !

ಬೆಂಗಳೂರು : ನಿನ್ನೆ ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ  ಬೆಂಗಳೂರಿನ ಹಲಸೂರು ಬಳಿಯ ಎಂ.ವಿ.ಗಾರ್ಡನ್ ದಲ್ಲಿ ನಡೆದಿದೆ.

ಹಲಸೂರು ಬಳಿಯ ಎಂ.ವಿ ಗಾರ್ಡನ್ ನಿವಾಸಿ ಮಿನ್ಯೂಸ್ (18) ಕೊಲೆಯಾದ ಯುವಕ. ಪ್ರತಿವರ್ಷದಂತೆ ಈ ವರ್ಷವೂ ಮಿನ್ಯೂಸ್ ತನ್ನ ಸ್ನೇಹಿತರ ಜೊತೆ ಏರಿಯಾದಲ್ಲಿ ಕ್ರಿಸ್ ಮಸ್ ಮುನ್ನಾ ದಿನವೇ ಕೇಕ್ ಕಟ್ ಮಾಡಿ ಸಂಭ್ರಮಿಸೋ ಕೆಲಸವನ್ನ ಮಾಡ್ತಿದ್ದನು.

ಹೀಗೆ ಸ್ನೇಹಿತರ ಜೊತೆ ನಿನ್ನೆ ತಡರಾತ್ರಿಯೂ ಕೇಕ್ ಕಟ್ ಮಾಡೋ ಭರದಲ್ಲಿ ಮಿನ್ಯೂಸ್ ಬ್ಯುಸಿಯಾಗಿದ್ದ. ಈ ವೇಳೆ ಮಿನ್ಯೂಸ್ ನ ಸ್ನೇಹಿತ ಸಂತೋಷ್ ತನ್ನದೇ ಏಜ್ ಗ್ರೂಪ್ ನ ಹೆಬ್ಬೆಟ್ಟು ಹರಿ ಎಂಬಾತನ ಜೊತೆ ಕೇಕ್ ಕಟ್ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕದಾಗಿ ಗಲಾಟೆಗೆ ಇಳಿದಿದ್ದಾನೆ.

ಸ್ನೇಹಿತ ಸಂತೋಷನ ಗಲಾಟೆ ನೋಡಿ ಮಿನ್ಯೂಸ್ ಗಲಾಟೆಯನ್ನ ಶಾಂತಗೊಳಿಸೋಕೆ ಮಧ್ಯ ತೆರಳಿದ್ದ. ಈ ವೇಳೆ ಹೆಬ್ಬೆಟ್ಟಿನ ಜೊತೆ ಕಾಣಿಸಿಕೊಂಡ ಶಿಂಬು ಎಂಬ ಯುವಕ ಸುಖಾ ಸುಮ್ಮನೆ ಗಲಾಟೆ ಬಿಡಿಸಲು ಬಂದಿದ್ದ ಮಿನ್ಯೂಸ್ ನ ಜೊತೆ ಗಲಾಟೆಗೆ ಇಳಿದುಬಿಟ್ಟಿದ್ದ. ಕಾಣಕಾಣುತ್ತಿದ್ದಂತೆ ಕೇಕ್ ಕತ್ತರಿಸಲು ತಂದಿದ್ದ ಚಾಕು ಹಿಡಿದು ಶಿಂಬು ಮಿನ್ಯೂಸ್ ಕತ್ತಿನ ಭಾಗಕ್ಕೆ ಬಲವಾಗಿ ಇರಿದಿದ್ದ. ಅಷ್ಟೇ, ಕತ್ತಿಗೆ ನಾಟಿದ ಐದೇ ನಿಮಿಷದಲ್ಲಿ ಮಿನ್ಯೂಸ್ ತೀವೃ ರಕ್ತಸ್ರಾವದಿಂದ ಅಸುನೀಗಿದ್ದ.

ಸದ್ಯ ಪ್ರಕರಣ ಹಲಸೂರು ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ಆರೋಪಿ ಶಿಂಬುವನ್ನ ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ./////