Belagavi News In Kannada | News Belgaum

INTUC ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಗೆ ಅದ್ದೂರಿ ಸ್ವಾಗತ

ದಾವಣಗೆರೆ : ಹರಿಹರ ತಾಲ್ಲೂಕಿನ ಕೊಕ್ಕನೂರು ಗ್ರಾಮದಲ್ಲಿ ನಡೆದ ಆಂಜನೇಯ ಸ್ವಾಮೀ ಕಾರ್ತಿಕೋತ್ಸವಕ್ಕೆ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ಆಹ್ವಾನದ ಮೇರೆಗೆ ಆಗಮಿಸಿದ ದಕ್ಷಿಣ ಭಾರತೀಯ ಚಿತ್ರರಂಗದ ನಾಯಕ ನಟಿ, ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಸವಿತಾ ಮಲ್ಲೇಶ್ ನಾಯ್ಕ  ಅವರನ್ನು ಕಾಂಗ್ರೆಸ್ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು.

ಬಳಿಕ ನಟಿ ಡಾ.ಸವಿತಾ ಮಲ್ಲೇಶ್ ನಾಯ್ಕ್ ಅವರು ಆಂಜನೇಯ ಸ್ವಾಮಿ ದರ್ಶನ ಪಡೆದರು. ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡಗಳ ಜಿಲ್ಲಾ ಕಾರ್ಯದರ್ಶಿ ಆದ ಮಾರುತಿ ದಾಸರ್ ಅವರ ಮನೆಗೆ ಭೇಟಿ ನೀಡಿದರು. ಗ್ರಾಮ ಪಂಚಾಯ್ತಿ ಸದಸ್ಯೆ ಸರೋಜಮ್ಮ ಬಸವರಾಜ ದಾಸರ್ ಹಾಗೂ ಕುಟುಂಬರ ಸತ್ಕಾರ ಮಾಡಿದರು.

ಅತಿಥಿ ಸತ್ಕಾರ ಸ್ವೀಕರಿಸಿ,  ಕಾರ್ತಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿ, ಆಂಜನೇಯ ಸ್ವಾಮಿ ಕಾರ್ತಿಕೋತ್ಸವಕ್ಕೆ ಆಗಮಿಸುವುದು ತುಂಬಾ ಸಂತೋಷ ತಂದಿದೆ. ಗ್ರಾಮಸ್ಥರ ನೀಡಿರುವ ಪ್ರೀತಿ ಮರೆಯಲಾಗದು ಎಂದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಎಂ.ಎನ್ ನಾಗೇಂದ್ರಪ್ಪ,ಗ್ರಾಮದ ಮಾಜಿ ಅದ್ಯಕ್ಷ ಅಭಿನಂದನ ಪಾಟೆಲ, ಸೋಶಿಯಲ್ ಮೀಡಿಯ ಅದ್ಯಕ್ಷರು ಎಂ ಹರೀಶ್, ಜಿಗಳಿ ಗ್ರಾಮ ಪಂಚಾಯತ್ ಉಪಾದ್ಯಕ್ಷ ಮಲ್ಲನಗೌಡ, ಕೃಷ್ಣ ನಾಯ್ಕ, ಸುನಿಲ ನಾಯ್ಕ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.//////