Belagavi News In Kannada | News Belgaum

ಅಕ್ಕನ ಮಗಳ ಮದುವೆಗೆಂದು ರಜೆಗೆ ಬಂದಿದ್ದ ಯೋಧ ಅನುಮಾನಾಸ್ಪದ ಸಾವು..

ಸವದತ್ತಿ: ಡಿ.2ರಂದು ಅಕ್ಕನ ಮಗಳ ಮದುವೆಗೆಂದು ರಜೆಗೆ ಬಂದಿದ್ದ,  ಯೋಧನೋರ್ವ  ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆತಾಲೂಕಿನ ಹಿರೂರ್ ಗ್ರಾಮದಲ್ಲಿ ನಡೆದಿದೆ.

ಯೋಧ ಈರಪ್ಪಾ ಪೂಜಾರಿ (37)  ಮೃತ ಯೋಧ,  ಅಕ್ಕನ ಮಗಳ ಮದುವೆಗಾಗಿ ವಿಶೇಷ ರಜೆಮಾಡಿಕೊಂಡು ಬಂದಿದ್ದ ಯೋಧ ಮದುವೆಯ  ಕಾರ್ಡ್  ಕೊಡಲು ಸಂಬಂಧಿಕರ ಮನೆಗೆ ಡಿ.25ರಂದು ಸಂಜೆ ಹೊರ ಹೋಗಿದ್ದರು, ತಡರಾತ್ರಿಯಾದರೂ  ಮನೆಗೆ ಮರಳಿ ಬಂದಿರಲಿಲ್ಲ.

ಬೆಳಗಾಗುವಷ್ಟರಲ್ಲಿ ಗ್ರಾಮದ ಹೊರ ವಲಯದಲ್ಲಿ ಮೃತ ಯೋಧನ ಶವ ಪತ್ತೆಯಾಗಿದೆ. ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ, ನಂತರ ಪಾಳುಬಿದ್ದ ಬಾವಿಗೆ ಮೃತದೇಹ ಎಸೆದಿರುವ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಎಲ್ಲರೂ ಅಂದುಕೊಂಡಂತೆ ನಡೆದಿದ್ದರೆ ಇಂದು ಯೋಧ ಅಕ್ಕನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದರು. ಆದರೆ ವಿಧಿಯ ಲಿಖಿತವೇ ಬೇರೆಯಾಗಿತ್ತು. ಅಕ್ಕನ ಮಗಳ ಲಘ್ನಪತ್ರಿಕೆ ಕೊಡಲು ಹೋದ ದಿನವೇ ಯೋಧ ಸಾವಿಗೀಡಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲಿಮುಟ್ಟಿದೆ.

ಇನ್ನು ಮೃತ ಸೈನಿಕನ ಪಾರ್ಥೀವ ಶರೀರವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರ ಮಡಲಾಗಿದೆ. ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ ನ್ಯಾಯ ಕೊಡುವಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಮುನವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////