Belagavi News In Kannada | News Belgaum

ಅಥಣಿ ಪುರಸಭೆ ಚುನಾವಣೆ: ಶಾಂತಿಯುತ ಮತದಾನ

ಅಥಣಿ :ಅಥಣಿ ಪುರಸಭೆ ಚುನಾವಣೆ ಇಂದು ಸೋಮವಾರ ಪಟ್ಟಣದ 27 ವಾರ್ಡಗಳ 40 ಬೂತಗಲ್ಲಿ ಶಾಂತಿಯುತವಾಗಿ ಜರುಗಿತು. ತಾಲೂಕ ತಹಸಿಲ್ದಾರ ಮತ್ತು ಚುನಾವಣಾ ಅಧಿಕಾರಿಗಳ ಮಾಹಿತಿ ಪ್ರಕಾರ ಶೇಕಡ 67.91 ರಷ್ಟು ಮತದಾನವಾಗಿದೆ. ಒಟ್ಟು 38664 ಮತದಾರರಲ್ಲಿ ಪುರುಷ ಮತದಾರರು 13275 ಮತ್ತು ಮಹಿಳಾ ಮತದಾರರು 12981 ಸೇರಿದಂತೆ 26256 ಮತದಾರರು ಮತದಾನ ಮಾಡಿದ್ದಾರೆ. ಇಂದು ಬೆಳಗ್ಗೆ 7ಗಂಟೆಯಿಂದಲೇ ಶಾಂತಿಯುತವಾಗಿ

ಆರಂಭವಾದ ಮತದಾನ ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಂಡಿತು. ಕಳೆದ ಬಾರಿಯ ಚುನಾವಣೆಗಿಂತಲೂ ಈ ಬಾರಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಿದರು. ವಯಸ್ಕರರು, ವಿಕಲಚೇತನರು, ದೂರದ ಊರಿನಲ್ಲಿ ವಾಸವಾಗಿದ್ದ ಮತದಾರರು ಕೂಡ ಆಗಮಿಸಿ ಮತದಾನ ಹಕ್ಕು ಚಲಾಯಿಸಿದ್ದು ಕಂಡುಬಂತು. ಅಥಣಿ ಶಾಸಕ ಹಾಗೂ ರಾಜ್ಯ ಕೊಳಗೇರಿ ನಿಗಮದ ಅಧ್ಯಕ್ಷ ಮಹೇಶ ಕುಮಟಳ್ಳಿ ವಾರ್ಡ್ ನಂ. 13ರಲ್ಲಿ

ಮತಚಲಾಯಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ ಮತದಾನ ಹಕ್ಕು ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ಪವಿತ್ರವಾಗಿದೆ, ಎಲ್ಲರೂ ತಮ್ಮ ಹಕ್ಕನ್ನು ಚಲಾವಣೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮತ್ತು ಅನೇಕ ಜನಪರ ಯೋಜನೆಗಳನ್ನು ಅಥಣಿ ಮತಕ್ಷೇತ್ರ ಕ್ಕೆ ತರುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಅಥಣಿ

ಪಟ್ಟಣದ ಅಭಿವೃದ್ಧಿಗಾಗಿ ಪ್ರನಾಳಿಕೆ ಎಲ್ಲಿ ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಭೇರಿ ಸಾಧಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಥಣಿ ಪುರಸಭೆ 27 ವಾರ್ಡುಗಳ ಪೈಕಿ ಚುನಾವಣಾ ಅಖಾಡದಲ್ಲಿದ್ದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್,

ಎಂಐಎಂ, ಎಸ್ಟಿಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 101 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬುಧವಾರ ದಿ 30ರಂದು ಫಲಿತಾಂಶ ಪ್ರಕಟವಾಗಲಿದೆ. ಸೂಕ್ತ ಭದ್ರತೆ: ಅಥಣಿ ಪುರಸಭೆ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಥಣಿ ಪೋಲಿಸರು ಸೂಕ್ತ ಭದ್ರತೆ ಭದ್ರತೆ

ವ್ಯವಸ್ಥೆ ಕೈಗೊಂಡಿದ್ದರು.1 ಡಿವೈಎಸ್ಪಿ, 1 ಸಿಪಿಐ, 3 ಪಿಎಸ್ಐ, 2 ಕೆ ಎಸ್ ಆರ್ ಪಿ, 1 ಡಿ ಎ ಆರ್ ಹಾಗೂ 70 ಜನ ಪೋಲಿಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಚುನಾವಣಾ ಸಿಬ್ಬಂದಿ ಸೇರಿದಂತೆ, ಪುರಸಭೆ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿಗಳು ಚುನಾವಣಾ ಯಶಸ್ವಿಗೆ

ಶ್ರಮಿಸಿದರು.//////