Belagavi News In Kannada | News Belgaum

ಕಾಂಗ್ರೆಸ್ ಅಭ್ಯರ್ಥಿ ಗೆಲುವು ಶತಸಿದ್ದ: ರೋಹನ ನಾಯಿಕ ವಿಶ್ವಾಸ

ಕಾಗವಾಡ :ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಇಂದು ನಡೆದ ಪುರಸಭೆ ಚುನಾವಣೆ ೨೦೨೧ ವಾರ್ಡ ನಂ ೧೪ ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾದ ವರ್ಷಾ ವೀವೆಕ ನಾಯಿಕ ರವರು  ಮತವನ್ನು ಚಲಾಯಿಸಿದರು.

ಈ ವೇಳೆ ಅಭ್ಯರ್ಥಿ ಪರ ರೋಹನ ನಾಯಿಕ ಮತನಾಡಿ . ಕಾಂಗ್ರೆಸ್ ಅಭ್ಯರ್ಥಿ ಗೆಲುವು ಶತಸಿದ್ದ ಉಗಾರ ಖುರ್ದ ಪುರಸಭೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವರ್ಷಾ ವೀವೆಕ ನಾಯಿಕ ಅವರು ಪ್ರಥಮ ಸುತ್ತಿನಲ್ಲಿ ಅತ್ಯಧಿಕ ಮತಗಳನ್ನು ಪಡೆದು ಜಯಭೇರಿ ಸಾಧಿಸಲಿದ್ದಾರೆಂದು ಎಂದರು.

ಅಲ್ಲದೆ ಉಗಾರ ಖುರ್ದ ಪುರಸಭೆ ಚುನಾವಣೆಯಲ್ಲಿ ಒಟ್ಟು 23 ವಾರ್ಡಗಳು ಇವೆ. ಇದರಲ್ಲಿ 20 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಗೆಲವು ಸಾಧಿಸುವುದು ನಿಶ್ಚಿತ ಎಂದು ಹೇಳಿದರು‌.  ಉಗಾರ ಖುರ್ದ ಪುರಸಭೆ ಚುನಾವಣೆಯ ಎಲ್ಲ ೧೪ನೇ ವಾರ್ಡಿನ ಮತ ಬಾಂದವರು ತಮ್ಮ ಮತವನ್ನು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ವರ್ಷಾ ವೀವೆಕ ನಾಯಿಕ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತವನ್ನು ನೀಡಿದ್ದಾರೆ. ಅವರ ಆಯ್ಕೆ ಶತಸಿದ್ಧವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.//////