Belagavi News In Kannada | News Belgaum

ವಿಷಕಾರಿ ಆಹಾರ ಸೇವಿಸಿ 80 ಶಾಲಾ ಮಕ್ಕಳು ಅಸ್ವಸ್ಥ..!

ಹಾವೇರಿ: ವಿಷಕಾರಿ  ಆಹಾರ ಸೇವಿಸಿ   80 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ರಾಣೆಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡದಲ್ಲಿ ನಡೆದಿದೆ.

ಇಂದು ಮಧ್ಯಾಹ್ನ 1.30ರ ಸುಮಾರಿಗೆ ಮಕ್ಕಳಿಗೆ ಬಿಸಿಯೂಟ ನೀಡಲಾಗಿದೆ. ಈ ವೇಳೆ ಬಾಲಕನೊಬ್ಬನ ತಟ್ಟೆಗೆ ಬಡಿಸಿದ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆಯಾಗಿದ್ದು, ತಕ್ಷಣವೇ  ಮಕ್ಕಳನ್ನು  ರಾಣೆಬೆನ್ನೂರು ಸಾರ್ವಜನಿಕ   ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅದರಲ್ಲಿ,  78 ಮಕ್ಕಳು ಆರೋಗ್ಯವಾಗಿದ್ದು, ಇಬ್ಬರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ./////