Belagavi News In Kannada | News Belgaum

ಬೆಳಗಾವಿ ಜಿಲ್ಲೆಯಾದ್ಯಂತ 52 ಸಕ್ರಿಯ ಆನೆಕಾಲು ರೋಗದ ಪ್ರಕರಣ

ಬೆಳಗಾವಿ : ಆನೆಕಾಲು ರೋಗವು ಒಬ್ಬರಿಂದೊಬ್ಬರಿಗೆ ಹರಡಿ, ಆರೋಗ್ಯರನ್ನು ಅನಾರೋಗ್ಯರನ್ನಾಗಿ ಮಾಡುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ತಕ್ಷಣ ಎಲ್ಲರೂ ನಿಮ್ಮ ನಿಮ್ಮ ರಕ್ತದ ಮಾದರಿಯನ್ನು ತಪಾಸಣೆ ಮಾಡಿಕೊಳ್ಳಬೇಕು ಎಂದು ಬೆಳಗಾವಿಯ ಆರೋಗ್ಯ ಮೇಲ್ವಿಚಾರಕರಾದ ವ್ಹಿ.ಆರ್.ಕುಂಬಾರ ಮನವಿ ಮಾಡಿದರು.

ಬೆಳಗಾವಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಿಗಳ ನಿಯಂತ್ರಣಾಧಿಕಾರಿಗಳಿಂದ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಆನೆಕಾಲು ರೋಗದ ಲಕ್ಷಣಗಳನ್ನು ಪತ್ತೆಹಚ್ಚುವ ರಕ್ತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಸೊಳ್ಳೆಗಳ ಕಚ್ಚುವಿಕೆಯಿಂದ ಪರಸ್ಪರ ಹರಡುವ ಆನೆಕಾಲು ರೋಗವು ವಯಸ್ಕ ಜಂತುಗಳು ದುಗ್ದ ಗ್ರಂಥಿ ಗಳಲ್ಲಿ ವಾಸಿಸಿ ಲಕ್ಷಾಂತರ ಸೂಕ್ಷ್ಮ ಜಂತುಗಳನ್ನು ರಕ್ತದೆಡೆಗೆ ಬಿಟ್ಟು ರೋಗಿಯನ್ನು ಕಚ್ಚಿದ ಸೊಳ್ಳೇಯು ಮೈಕ್ರೋ ಫೈಲೇರಿಯ ಜಂತುಗಳಿಂದ ಬೇರೆಯವರಿಗೆ ಕಚ್ಚುವ ಮೂಲಕ ಆನೆಕಾಲು ರೋಗದ ಹರಡುವಿಕೆಗೆ ಕಾರಣವಾಗುತ್ತದೆ ಎಂದು ಜಾಗೃತಿ ಮೂಡಿಸಿದರು.

ಈ ಆನೆಕಾಲು ರೋಗದ ಲಕ್ಷಣಗಳ ಕುರಿತು ತಿಳಿಸಿದ ಅವರು ಕೆಲವರಿಗೆ ಆಗಾಗ ಜ್ವರ ಇಲ್ಲವೇ ಯಾವುದೇ ಲಕ್ಷಣಗಳು ಇರದೇ ಇದ್ದರು ಸೋಂಕು ನಿಧಾನವಾಗಿ ಹರಡಲು ಪ್ರಾರಂಭವಾಗುತ್ತದೆ ಕಾಲುಗಳ ಊತ ನೋವು ಹೆಚ್ಚಾಗಿ ರೋಗಿಯ ಪರಿ‌ಸ್ಥಿತಿ ತೀವ್ರ ಕ್ಷೀಣಿಸುತ್ತಾ ಹೋಗುವ ಸಂಭವ ತಲುಪುತ್ತದೆ. ಅದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ತಮ್ಮ ರಕ್ತ ತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಸ್ ಆರ್ ತಳವಾರ ಹೆಚ್ಚಿನ ಮಾಹಿತಿ ನೀಡಿ
ಸಾಮಾನ್ಯವಾಗಿ ಇತರೆ ರೋಗಗಳ ತಪಾಸಣೆ ದಿನದ ಯಾವುದೇ ಸಮಯದಲ್ಲಾದರೂ ಮಾಡಬಹುದು ಆದರೆ ಈ ಆನೆಕಾಲು ರೋಗವು ರಾತ್ರಿ 8 ಗಂಟೆಯ ನಂತರ ರಕ್ತದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗಾಗಿ ತಪ್ಪದೆ ಮೂರುದಿನಗಳ ಕಾಲ ಪ್ರತಿದಿನ ರಾತ್ರಿ 8 ಗಂಟೆಯಿಂದ 11ಗಂಟೆಯವರೆಗೆ ವಿಭಿನ್ನವಾಗಿಯೇ ಈ ರಕ್ತ ತಪಾಸಣಾ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಬೆಳಗಾವಿ ಜಿಲ್ಲೆಯಾದ್ಯಂತ 52 ಸಕ್ರಿಯ ಆನೆಕಾಲು ರೋಗದ ಪ್ರಕರಣಗಳು ಪತ್ತೆಯಾಗಿವೆ ರ್ಯಾಂಡಮ್ ಆಗಿ ಆಯ್ಕೆ ಮಾಡಿ ಸಂಬರಗಿ ಗ್ರಾಮದಲ್ಲಿ ತಪಾಸಣೆ ಮಾಡಲಾಗುತ್ತಿದೆ ಅದರಂತೆ ಪ್ರತಿಯೊಬ್ಬರೂ ರಕ್ತ ತಪಾಸಣೆ ಮಾಡಿಕೊಳ್ಳಲು ತಿಳಿಸಿದ್ದಾರೆ./////