Belagavi News In Kannada | News Belgaum

ಮೋದಿ ತಪ್ಪು ನಿರ್ಧಾರಗಳಿಗೆ ತಲೆಬಾಗುವವರು ಹಿಂದುತ್ವವಾದಿಗಳು: ರಾಹುಲ್ ಗಾಂಧಿ

ನವದೆಹಲಿ: ಹಿಂದುತ್ವದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದ್ದಾರೆ.
ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ತಪ್ಪು ನಿರ್ಧಾರಗಳಿಗೆ ತಲೆಬಾಗುವವರು ಹಿಂದುತ್ವವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಸವಾಲುಗಳನ್ನು ಎದುರಿಸುವವರು ಹಿಂದೂಗಳು ಮತ್ತು ಸಮಸ್ಯೆಗಳಿಂದ ಹೆದರಿ ಓಡಿಹೋಗುವವರು ಹಿಂದುತ್ವವಾದಿಗಳು ಎಂದ ಅವರು, ಹಿಂದುತ್ವದ ಸಿದ್ಧಾಂತವನ್ನು ನಂಬುವವರು ಯಾರ ಮುಂದೆಯಾಗಲಿ ತಲೆಬಾಗುತ್ತಾರೆ. ಏಕೆಂದರೆ ಅವರ ಹೃದಯದಲ್ಲಿ ಸತ್ಯವಿಲ್ಲ ಎಂದರು.
ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ಅನ್ನು ಗುರಿಯಾಗಿಸಿಕೊಂಡ ರಾಹುಲ್ ಗಾಂಧಿ, ಈ ಗುಂಪು ದ್ವೇಷವನ್ನು ಹರಡುತ್ತಿದೆ. ನಾವು ಪ್ರೀತಿಯಿಂದ ಹೋರಾಡಬೇಕು ಎಂದು ಹೇಳಿದರು.////