Belagavi News In Kannada | News Belgaum

ಕಾರಾಗೃಹ ಕಲಿಕಾ ಕೇಂದ್ರಗಳಿಗೆ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರ ಭೇಟಿ

ಕಾರಾಗೃಹ ಕಲಿಕಾ ಕೇಂದ್ರಗಳಿಗೆ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರ ಭೇಟಿ
ದಿನಾಂಕ : 27/12/2021 ರಂದು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ “ಕಲಿಕೆಯಿಂದ ಬದಲಾವಣೆ” ಶಿರ್ಷಿಕೆ ಅಡಿಯಲ್ಲಿ ಆರಂಭಿಸಲಾದ ಕಲಿಕಾ ಕೇಂದ್ರಗಳಿಗೆ ಲೋಕ ಶಿಕ್ಷಣ ನಿರ್ದೇಶಾನಾಲಯ ಬೆಂಗಳೂರು ಇದರ ನಿರ್ದೇಶಕರಾದ ಶ್ರೀಮತಿ. ಸುಷ್ಮಾ ಗೋಡಬೋಲೆ (ಭಾ.ಆ.ಸೇ.) ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು.

ನಂತರ ಕಾರಾಗೃಹದ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿ, ತಾವೆಲ್ಲ ಜೀವನದಲ್ಲಿ ಯಾವುದೋ ಆಕಸ್ಮಿಕ ಘಟನೆಯ ನಿಮಿತ್ಯ ಈ ಕಾರಾಗೃಕ್ಕೆ ಬಂದಿರುವಿರಿ. ಆದ್ದರಿಂದ ಇಲ್ಲಿರುವ ಸಮಯ ತಮಗೆಲ್ಲ ಅತೀ ಮಹತ್ವದ್ದು ಆಗಿದೆ. ಆದ್ದರಿಂದ ತಾವು ಇಂತಹ ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕಾರಾಗೃಹದ ವಿದ್ಯಾವಂತ ನಿವಾಸಿಗಳು ತಮ್ಮ ಬ್ಯಾರಕ್‍ನಲ್ಲಿರುವ ಇತರ ಅನಕ್ಷರಸ್ಥ ನಿವಾಸಿಗಳಿಗೆ ಅಕ್ಷರಾಭ್ಯಾಸ ಮಾಡಿಸಬೇಕು. ಈ ರೀತಿಯಾದ ಕಾರ್ಯವನ್ನು ಕೈಕೊಂಡು ಅನಕ್ಷರತೆಯನ್ನು ಹೊಗಲಾಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

 

ತಾವು ಅಕ್ಷರಾಭ್ಯಾಸದ ಜೊತೆಗೆ ಕಾರಾಗೃಹದಲ್ಲಿ ಏರ್ಪಡಿಸಲಾಗುವ ವಿವಿಧ ಕೌಶಲ್ಯ ಅಭಿವೃದ್ಧಿ ತರಬೇತಿಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಹಾಗೂ ನೀವು ಲೋಕ ಶಿಕ್ಷಣ ನಿರ್ದೇಶನಾಲಯದ ಗುರಿ ಹಾಗೂ ಉದ್ದೇಶಗಳ ಕುರಿತು ರೂಪಕದ ಮೂಲಕ ಅತ್ಯಂತ ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಿದ್ದಿರಿ ಇದು ಒಂದು ಅತ್ಯುತ್ತಮ ರೂಪಕವಾಗಿದೆ. ಈ ಸಂಸ್ಥೆಯಲ್ಲಿ 20 ಜನ ವಿದ್ಯಾವಂತ ನಿವಾಸಿಗಳು 200 ಅನಕ್ಷರಸ್ಥ ನಿವಾಸಿಗಳಿಗೆ ಅಕ್ಷರಾಭ್ಯಾಸ ಮಾಡಿಸಿ ವಿದ್ಯಾವಂತರನ್ನಾಗಿ ಮಾಡಿಸುವಲ್ಲಿ ಯಶಸ್ವಿ ಯಾಗಬೇಕು ಎಂದು ಹೇಳಿ ಶುಭ ಹಾರೈಸಿದರು. ಹಾಗೂ ಲೋಕ ಶಿಕ್ಷಣ ಇಲಾಖೆಯ ವತಿಯಿಂದ ನಿವಾಸಿಗಳಿಗೆ ಕಲಿಕೆಗೆ ಬೇಕಾಗುವ ಎಲ್ಲ ಸಾಮಗಿಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ. ಜಯಶ್ರೀ ಎ. ಎಮ್ ಮಾತನಾಡಿ ಇಲಾಖೆಯ ಉದ್ದೇಶದ ಕುರಿತು ನಿವಾಸಿಗಳ ರೂಪಕ ಅತ್ಯಂತ ಮನ ಮುಟ್ಟುವಂತೆ ಪ್ರದರ್ಶನವಾಗಿದೆ. ಹಾಗೂ ಈ ಕಲಿಕೆಯಿಂದ ಬದಲಾವಣೆ ಕಾರ್ಯಕ್ರಮ ಯಶಸ್ವಿಗೆ ಇಲಾಖೆ ಸದಾಕಾಲ ಸಿದ್ದ ಎಂದು ಹೇಳಿದರು.
ಅಧ್ಯಕ್ಷತೆ ವಹಸಿದ ಕಾರಾಗೃಹದ ಮುಖ್ಯ ಅಧೀüಕ್ಷಕರಾದ ಶ್ರೀ. ಕೃಷ್ಣಕುಮಾರ ಮಾತನಾಡಿ ಕಾರಾಗೃಹ ಇಲಾಖೆಯ ಕಲಿಕೆಯಿಂದ ಬದಲಾವಣೆ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ರೀತಿಯ ಸಹಕಾರವು ನೀಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವಾಸಿಗಳಾದ ಮಲ್ಲಿಕಾರ್ಜುನ, ಮಹಮ್ಮದ ಹನೀಫ, ಈರಪ್ಪ, ಮಹಾಂತೇಶ ಹಾಗೂ ಮಧುಸೂಧನ ಇವರುಗಳು ಅನಕ್ಷರತೆಯ ಕುರಿತು ರೂಪಕ ಪ್ರದರ್ಶಿಸಿದರು. ಹಾಗೂ ಅರುಣ ಎಂಬ ಸಜಾಬಂದಿ ತಾನು ಅನಕ್ಷರಸ್ಥನಾಗಿದ್ದರು ತತ್ವಪದ ಹಾಡಿ ಎಲ್ಲರ ಗಮನ ಸೇಳೆದರು.
ವೇದಿಕೆಯ ಮೇಲೆ ಧಾರವಾಡ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಶ್ರೀ. ಖಾಜಿ ತಾಲೂಕಾ ಸಂಯೋಜಿಕರಾದ ಶ್ರೀ. ಹನಮಂತ ಭಜಂತ್ರಿ ಶ್ರೀ. ರಾಜಕುಮಾರ ಕುಂಬಾರ ಹಾಗೂ ಜೈಲರ್ ಶ್ರೀ. ಅಭಿಷೇಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಹಾಯಕ ಅಧಿಕ್ಷಕರಾದ ಶ್ರೀ. ಶಹಾಬುದ್ಧಿನ ಕೆ. ಪ್ರಸ್ತಾವೀಕ ಮಾತನಾಡಿ ಸ್ವಾಗತಿಸದರು. ಕಲಿಕಾ ಕೇಂದ್ರಗಳ ಉಸ್ತುವಾರಿ ವಹಿಸಿರುವ ಉಪಾಧ್ಯಾಯರಾದ ಶ್ರೀ. ಶಶಿಕಾಂತ ಯಾದಗುಡೆ ಕಾರ್ಯಕ್ರಮ ನಿರುಪಿಸಿ ವಂದಿಸಿದರು.