Belagavi News In Kannada | News Belgaum

ಕನ್ನಡ ಚಳುವಳಿ ಹೋರಟಗಾರ ವಾಟಾಳ ನಾಗರಾಜ್ ಸೇರಿದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ-೨೯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಎಂಇಎಸ್ ನಿಷೇಧ ಮಾಡುವ ಖಡಕ್ ತೀರ್ಮಾನ ತೆಗೆದುಕೊಳ್ಳದ್ದರಿಂದ ಡಿ.31ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕೆಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

 

ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಬುಧವಾರ ಎಂಇಎಸ್ ನಿಷೇಧ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಪಂಚಾಂಗ, ನಕ್ಷತ್ರ ನೋಡಿಕೊಂಡು ಇಂಇಎಸ್ ನಿಷೇಧ ಮಾಡಲು ಸಾಧ್ಯವಿಲ್ಲ. ಪ್ರತಿಭಟನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

ರಾಜ್ಯ ಸರಕಾರ ಎಂಇಎಸ್ ನಿಷೇಧ ಮಾಡಲು ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿತ್ತು. ಆದರೆ ಈ‌ ತೀರ್ಮಾನ ಮಾಡದೇ ಇರುವುದರಿಂದ ಬಂದ್ ಕರೆ ನೀಡಲಾಗಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.

 

ಎಂಇಎಸ್ ಬೆಳಗಾವಿಯಲ್ಲಿ ಇರಬಾರದು, ಮಹಾರಾಷ್ಟ್ರದಲ್ಲಿ ಇರಬೇಕು. ರಾಜ್ಯೋತ್ಸವ ದಿನ ಕರಾಳ ದಿನ, ಅವೇಶನ ವೇಳೆ ಮಹಾಮೇಳ ನಡೆಸುತ್ತದೆ. ರಾಯಣ್ಣ ಪ್ರತಿಮೆ ಭಗ್ನ ಗೊಳಿಸುತ್ತಾರೆ , ಕನ್ನಡ ಧ್ವಜ ಸುಟ್ಟು ಹಾಕುತ್ತಾರೆ. ಇಂತಹ ಪುಂಡ ಸಂಘಟನೆ ಬೆಳಗಾವಿಯಲ್ಲಿ ಇರಬೇಕಾ ಎಂದು ಪ್ರಶ್ನಿಸಿದರು.

ಡಿಸೆಂಬರ್ 31ರ ಬೆಳಗ್ಗೆ ಯಿಂದಲೇ ಸಂಜೆ 6 ಗಂಟೆಯವರೆಗೂ ಬಂದ್ ನಡೆಯಲಿದೆ. ಬಂದ್ ಕರೆಟ್ಟಿದ್ದರಿಂದ ಬಂದ್ ನಡೆಯಲಿದೆ. ಸೂರ್ಯ, ಚಂದ್ರ ತಮ್ಮ ದಿಕ್ಕು ಬದಲಾಯಿಸಿದ್ರು, ನಮ್ಮ ನಿರ್ಧಾರ ಬದಲಾಗುವುದಿಲ್ಲ. ಎಂಇಎಸ್ ನಿಷೇಧವಾಗಬೇಕು ಎಂದು ಸ್ಪಷ್ಟಪಡಿಸಿದರು.

 

ಎಂಇಎಸ್ ನಿಷೇಧಿಸುವಂತೆ ಚನ್ನಮ್ಮ‌ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ವಾಟಾಳ್ ನಾಗರಾಜ್ ಗೆ ಪೊಲೀಸರು ಬಂಧಿಸಿದರು. ಕನ್ನಡ ಹೋರಾಟಗಾರರಾದ ರಾಜು ಕೋಲಾ, ವಾಜೀದ ಹಿರೇಕುಡಿ, ಈರಣ್ಣಾ ಜೊಣ್ಣದ ಸೇರಿದಂತೆ ಇತರರು ಹಾಜರಿದ್ದರು.