Belagavi News In Kannada | News Belgaum

ಅಥಣಿ ಪುರಸಭೆಯಲ್ಲಿ ತಾಯಿ ಮಗ ಭರ್ಜರಿ ಗೆಲುವು

ಅಥಣಿ ಪುರಸಭೆಯ ಚುನಾವಣೆ ಹಲವು ದಾಖಲೆಗಳನ್ನು ಬರೆದಿದ್ದು ಒಂದು ಕಡೆ ದಂಪತಿಗಳಿಗೆ ಬಹುಮತ ನೀಡಿ ಆಶಿರ್ವಾದ ಮಾಡಿದರೆ ಇನ್ನೊಂದು ಕಡೆ ತಾಯಿ ಮತ್ತು ಮಗನಿಗೆ ಬಹುಮತ ನೀಡಿ ಪುರಸಭೆ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ.ವಾರ್ಡ ನಂಬರ ಹದಿನಾರರಲ್ಲಿ ಮಲ್ಲಿಕಾರ್ಜುನ ಸದಾಶಿವ ಬುಟಾಳಿ ಮತ್ತು ವಾರ್ಡ ನಂಬರ ಹದಿನೇಳರಲ್ಲಿ ಶಿವಲೀಲಾ ಸದಾಶಿವ ಬುಟಾಳಿ ಅವರಿಗೆ ಗೆಲುವಿನ ಜಯಮಾಲೆ ತೊಡಿಸಿದ್ದಾರೆ.
ಮಲ್ಲಿಕಾರ್ಜುನ ಬುಟಾಳಿ ವಾರ್ಡ ನಂಬರ ಹದಿನಾರರಲ್ಲಿ 600  ಅವರ ತಾಯಿ ಶಿವಲೀಲಾ ಬುಟಾಳಿ 435 ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಚುನಾಯಿತ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.
ಈ ವೇಳೆ ಮಾತನಾಡಿದ ಶಿವಲೀಲಾ ಸದಾಶಿವ ಬುಟಾಳಿ  ‌ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನ್ನನ್ನು ವಾರ್ಡ ನಂಬರ ಹದಿನೇಳರಲ್ಲಿ ಬಹುಮತ ನೀಡಿ ಗೆಲ್ಲಿಸಿದ ಮತದಾರರು ವಾರ್ಡ ನಂಬರ್ ಹದಿನಾರರಲ್ಲಿ  ನಮ್ಮ ಸುಪುತ್ರ ಮಲ್ಲಿಕಾರ್ಜುನ ಸದಾಶಿವ ಬುಟಾಳಿಗೆ ಬಹುಮತ ನೀಡಿದ್ದಾರೆ.ಹದಿನಾರು ಮತ್ತು ಹದಿನೇಳನೆಯ ವಾರ್ಡುಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಮಾಡುವದೆ ನಮ್ಮ ಗುರಿಯಾಗಿದೆ ಎಂದರು.