Belagavi News In Kannada | News Belgaum

ವಾರ್ಡ ನಂಬರ್ ೭ ರಲ್ಲಿ ಸಯ್ಯದ್ ಅಮೀನ್ ಗದ್ಯಾಳಗೆ ಮೂರನೆ ಬಾರಿಯ ಭರ್ಜರಿ ಗೆಲುವು

ಅಥಣಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಾರ್ಡ ನಂಬರ್ ಏಳರಲ್ಲಿ ಸ್ಪರ್ದಿಸಿದ್ದ ಸಯ್ಯದ್ ಅಮೀನ್ ಗದ್ಯಾಳ ಸತತವಾಗಿ ಮೂರನೆಯ ಬಾರಿ ಆಯ್ಕೆ ಆಗುವ ಮೂಲಕ ಗೆಲುವಿನ ಸಂಭ್ರಮಕ್ಕೆ ಭಾಜನರಾಗಿದ್ದಾರೆ. ವಾರ್ಡ ನಂಬರ್ ಏಳರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನೇರ ಪೈಪೋಟಿ ಎದುರಾಗಿದ್ದು ಸಯ್ಯದ್ ಅಮೀನ್ ಗದ್ಯಾಳ 1018 ಮತಗಳನ್ನು ಪಡೆಯುವ ಮೂಲಕ ಜನಾಶಿರ್ವಾದದಿಂದ ಮೂರನೆಯ ಬಾರಿ ಗೆಲುವಿನ ನಗೆ ಬೀರಿದ್ದಾರೆ.
 ಈ ಬಗ್ಗೆ ಮಾತನಾಡಿದ ಸಯ್ಯದ್ ಅಮಿನ್ ಗದ್ಯಾಳ ಸತತವಾಗಿ ಮೂರನೆಯ ಬಾರಿ ಸಿಕ್ಕ ಈ ಗೆಲುವು ನನ್ನ ವೈಯಕ್ತಿಕ ಗೆಲುವಲ್ಲ ಪಕ್ಷದ ಎಲ್ಲ ಕಾರ್ಯಕರ್ತರ ಮತ್ತು ಹಿರಿಯರ ಹಾಗೂ ಮುಖಂಡರ ಗೆಲುವಾಗಿದೆ. ವಾರ್ಡ ನಂಬರ್ ಏಳರಲ್ಲಿ ಈ ಮೊದಲು ನಾನು ಮಾಡಿದ ಜನಪರ ಕೆಲಸಗಳನ್ನು ನೋಡಿ
ಜನರು ವಾರ್ಡ ನಂಬರ್ ಏಳರಲ್ಲಿ ನನ್ನನ್ನು ಬಹುಮತಗಳಿಂದ ಆಯ್ಕೆ ಮಾಡುವ ಮೂಲಕ ಆಶಿರ್ವದಿಸಿದ್ದು ಮುಂಬರುವ ದಿನಗಳಲ್ಲಿ ಜನಪರ ಕೆಲಸಗಳನ್ನು ಮಾಡುವ ಮೂಲಕ ವಾರ್ಡಿನ ಪ್ರತಿಯೊಬ್ಬರ ಸಮಸ್ಯೆಗಳಿಗೆ ಸ್ಪಂದಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆದ್ಯತೆ ನೀಡಿ ಕೆಲಸ ಮಾಡಲಿದ್ದೇನೆ ಎಂದರು.
ಈ ವೇಳೆ ಈ ವೇಳೆ ಡಾ” ಲೋಣಾರಿ, ವಹಿದ ಗದ್ಯಾಳ, ಹಾರುಣ ಮೋಮಿನ, ಸುಂದರ ಸಂಖ, ರಾಜು ಲೋಣಾರಿ, ಹರೀಶ ಲೋಣಾರಿ, ನಾರಾಯಣ ಪವಾರ,ದರೆಪ್ಪಾ ಬಳ್ಳೊಳ್ಳಿ, ಚಂದ್ರು ಸಂಖ,ಜಗ್ಗು ಕೊಪ್ಪ,ಸರಪರಜ ಮೋಮಿನ, ಅಶಪಾಕ ಗದ್ಯಾಳ, ಶಕೀಲ ಗದ್ಯಾಳ, ಸಮಿವುಲ್ಲಾ ಗದ್ಯಾಳ, ಆಶೀಪ್ ಮುಲ್ಲಾ ಸೇರಿದಂತೆ ಇನ್ನೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.