Belagavi News In Kannada | News Belgaum

ಅಥಣಿ ಪುರಸಭೆ ಚುನಾವಣೆಯಲ್ಲಿ ಜೋಡೆತ್ತುಗಳ ಭರ್ಜರಿ ಗೆಲುವು

ಅಥಣಿ: ಮತಕ್ಷೇತ್ರದ ರಾಜಕಾರಣದಲ್ಲಿ ಸದಾಕಾಲ ಜೊತೆಯಾಗಿರುವ ಸಹೋದರರಂತೆ ಕೂಡಿಯೇ ಇರುವ ಇಬ್ಬರು ಸ್ಪರ್ಧಿಗಳಿಗೆ ಮತದಾರ ಪ್ರಭು ಆಶಿರ್ವಾದ ಮಾಡುವ ಮೂಲಕ ಗೆಲುವಿನ ನಗೆ ಬೀರಲು ಕಾರವಾಗಿದ್ದಾರೆ. ಅಥಣಿ ಪಟ್ಟಣದ ವಾರ್ಡ ನಂಬರ್ 4 ರಲ್ಲಿ ಪಕ್ಷೇತರ ಅಭ್ಯರ್ಥಿ ದತ್ತಾ ವಾಷ್ಟರ್ ಮತ್ತು ವಾರ್ಡ ನಂಬರ್ 8 ರಲ್ಲಿ  ದಿಲೀಪ ಲೋಣಾರೆ ಅವರ ಧರ್ಮಪತ್ನಿ ಶಾಂತಾ ದಿಲೀಪ ಲೋಣಾರೆ ಅವರಿಗೆ ಮತದಾರ ಪ್ರಭು ಆಶಿರ್ವಾದ ಮಾಡಿದ್ದಾರೆ. ಪುರಸಭೆಯ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ ಮಾತನಾಡಿ ಮಾಡಿದ ಜನಪರ ಕೆಲಸಗಳು ತಮ್ಮ ಕೈ ಹಿಡಿದಿದ್ದು ಅಥಣಿ ಪುರಸಭೆಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದು ವಾರ್ಡ ನಂಬರ್ ಎಂಟರಲ್ಲಿ ಹಿರಿಯರು, ಮತ್ತು ವಿವಿಧ ಸಮಾಜದ ಜನರು ನಮಗೆ ಆಶಿರ್ವಾದ ಮಾಡಿ ಆರಿಸಿ ತಂದಿದ್ದು ತನುಮನ ಧನದಿಂದ ಗೆಲ್ಲಿಸಿ ತಂದ ಎಲ್ಲರಿಗೂ ಎಂದಿಗೂ ಚಿರ ಋಣಿಯಾಗಿರುತ್ತೇನೆ ಎಂದರು.
ಈ ವೇಳೆ ಮಾತನಾಡಿದ ವಾರ್ಡ ನಂಬರ 4 ರಲ್ಲಿ ಪಕ್ಷೇತರವಾಗಿ ಖಣಕ್ಕೆ ಇಳಿದು ಗೆಲುವು ಸಾಧಿಸಿದ ದತ್ತಾ ವಾಷ್ಟರ್ ಮಾತನಾಡಿ ಜಾತಿ ಭೇದ ಇಲ್ಲದೆ ನನಗೆ ಆಶಿರ್ವಾದ ಮಾಡಿದ ವಾರ್ಡ ನಂಬರ್ ನಾಲ್ಕರ ಎಲ್ಲ ಸಾರ್ವಜನಿಕರ ಋಣವನ್ನು ಅವರ ಮನೆಯ ಮಗನಾಗಿ ಕೆಲಸ ಮಾಡುವ ಮೂಲಕ ತೀರಿಸುತ್ತೇನೆ. ಕಳೆದ ಇಪ್ಪತ್ತು ವರ್ಷಗಳ ರಾಜಕೀಯದಲ್ಲಿ ನನ್ನ ಗಾಢಪಾದರ್ ಮಾರ್ಗದರ್ಶನದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ .ಈ ವೇಳೆ ಕಮಲಾ ಹಿರೆಮನಿ, ಶ್ರೀಕಾಂತ ಹಿರೇಮನಿ, ನಾಗರಾಜ ಹೋಳಿಕಟ್ಟಿ, ಶ್ರಾವಣ ಹಿರೇಮನಿ,
ಮಂಜು ಹೋಳಿಕಟ್ಟಿ, ಮಾರುತಿ ಹುಲ್ಯಾಳ, ಸೇರಿದಂತೆ ವಾರ್ಡ ನಂಬರ್ ನಾಲ್ಕು ಮತ್ತು ಎಂಟರ ಮತದಾರರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.