Belagavi News In Kannada | News Belgaum

ಅಥಣಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು.ದಂಪತಿಗಳಿಗೆ ಜಯ

ಅಥಣಿ: ಪುರಸಭೆಯ ಇಪ್ಪತ್ತೇಳು ವಾರ್ಡಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಐಹೊಳೆ ದಂಪತಿಗಳಿಗೆ ಮತದಾರ ಜಯದ ಮಾಲೆ ತೊಡಿಸಿದ್ದಾರೆ. ಪ್ರತ್ಯೇಕ ವಾರ್ಡಗಳಲ್ಲಿ ಐಹೊಳೆ ದಂಪತಿಗಳಾದ ರಾವಸಾಬ ಐಹೊಳೆ ಅವರನ್ನು ವಾರ್ಡ ನಂಬರ್ ಹನ್ನೊಂದರಲ್ಲಿ ಮತ್ತು ಅವರ ಧರ್ಮ ಪತ್ನಿ ವಿದ್ಯಾ ರಾವಸಾಬ್ ಐಹೊಳೆ ಅವರನ್ನು ವಾರ್ಡ ನಂಬರ ಇಪ್ಪತ್ತೈದರಲ್ಲಿ ಮತದಾರರು ಬಹುಮತ ನೀಡಿ ಗೆಲ್ಲಿಸಿದ್ದಾರೆ.
ವಾರ್ಡ ನಂಬರ್ ಹನ್ನೊಂದರಲ್ಲಿ ರಾವಸಾಬ್ ಐಹೊಳೆ  362 ಮತಗಳನ್ನು ಪಡೆದರೆ ವಿದ್ಯಾ ರಾವಸಾಬ್ ಐಹೊಳೆ ವಾರ್ಡ ನಂಬರ್ 25 ರಲ್ಲಿ 556 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.
ಈ ಬಗ್ಗೆ ಮಾತನಾಡಿದ ರಾವಸಾಬ್ ಐಹೊಳೆ ಈ ಮೊದಲು ಪುರಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದು ಜನಪರ ಕೆಲಸ ನೋಡಿದ ಮತದಾರರು ನಮಗೆ ಬಹುಮತ ನೀಡುವ ಮೂಲಕ ಆಶಿರ್ವಾದ ಮಾಡಿದ್ದು ಗಂಡ ಹೆಂಡತಿ ಇಬ್ಬರನ್ನು ಪುರಸಭೆ ಸದಸ್ಯರಾಗಿ ಆಯ್ಕೆ ಮಾಡಿದ್ದು ಜನಸೇವೆಯೆ ಜನಾರ್ಧನ ಸೇವೆ ಎಂದು ಕೆಲಸ ಮಾಡುವ ಮೂಲಕ ಎರಡೂ ವಾರ್ಡಗಳ ಜನರ ಸಮಸ್ಯೆಗಳಿಗೆ ಜಾತಿಭೇದ,ಮತ ಪಂಥ ಮತ್ತು ಪಕ್ಷ ಭೇದಭಾವ ತೋರದೆ ಪ್ರಾಮಾಣಿಕವಾಗಿ ಸ್ಪಂದಿಸಲಿದ್ದೇವೆ ಎಂದರು.
ಈ ವೇಳೆ ಎನ್. ಪ್ರಶಾಂತರಾವ್, ಆಶಾ ಐಹೊಳೆ, ಪಾಡು ಐಹೊಳೆ, ಶ್ರೀನಿವಾಸ ದೊಡಮನಿ, ಉತ್ತಮ ಬೇವಿನಗಿಡದ, ಇನ್ನೂ ಹಲವರು ಉಪಸ್ಥಿತರಿದ್ದರು.