Belagavi News In Kannada | News Belgaum

ಸಹಕಾರ ಶಿಕ್ಷಣ ನಿಧಿಗೆ ಹಣ ಪಾವತಿಸಲು ಸಹಕಾರ ಸಂಘಗಳಿಗೆ ಸೂಚನೆ

 

ಬೆಳಗಾವಿ, ಡಿ.29: ಬೆಳಗಾವಿ ಜಿಲ್ಲೆಯಲ್ಲಿ 5910 ಸಹಕಾರ ಸಂಘಗಳಿದ್ದು, ಅದರಲ್ಲಿ 4801 ಸಹಕಾರ ಸಂಘಗಳು ಕಾರ್ಯನಿರ್ವಹಿಸುತಿವೆ.
ಇದರಲ್ಲಿ ಬಹಳಷ್ಟು ಸಹಕಾರ ಸಂಘಗಳು ಲಾಭದಲ್ಲಿವೆ.
 ಲಾಭದಲ್ಲಿರುವ ಸಹಕಾರ ಸಂಘಗಳು ಶೇಕಡಾ 2 ಪ್ರತಿಶತ ಸಹಕಾರ ಶಿಕ್ಷಣ ನಿಧಿಯನ್ನು, ಬೆಳಗಾವಿ ಜಿಲ್ಲಾ ಸಹಕಾರ ಯುನಿಯನ್ ನಿ., ರವರ ಮೂಲಕ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ಪಾವತಿ ಮಾಡುವ ಬಗ್ಗೆ ಬೆಳಗಾವಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಜಂಟಿ ನಿರ್ದೇಶಕರು, ಬೆಳಗಾವಿ ‘ಸುವರ್ಣ ವಿಧಾನ ಸೌಧ” ಕೊಠಡಿ ಸಂಖ್ಯೆ 16,17,17ಎ,18 ದಕ್ಷಿಣದ್ವಾರ ಬೆಳಗಾವಿ – 590020, ದೂರವಾಣಿ ಸಂಖ್ಯೆ: 0831-2432579 e-mail: [email protected] ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.