Belagavi News In Kannada | News Belgaum

ನೂತನ ಪೊಲೀಸ್‌ ಆಯುಕ್ತ ಡಾ.ಬೋರಲಿಂಗಯ್ಯ ಅಧಿಕಾರ ಸ್ವೀಕಾರ

ಬೆಳಗಾವಿ : ನೂತನ ನಗರ ಪೊಲೀಸ್‌ ಆಯುಕ್ತ ಡಾ.ಬೋರಲಿಂಗಯ್ಯ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.

ದಾವಣೆಗೆರೆಯಲ್ಲಿ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಸರ್ಕಾರ ಶುಕ್ರವಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು. ಬೆಳಗಾವಿಯಿಂದ ವರ್ಗಾವಣೆಗೊಂಡ ಆಯುಕ್ತ ಡಾ. ತ್ಯಾಗರಾಜನ್‌ ಅವರು ಅಧಿಕಾರ ಹಸ್ತಾಂತರಿಸಿದರು.

ಸರ್ಕಾರದ ಆದೇಶದಂತೆ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಈ ಹಿಂದೆ ಇದ್ದ ಅಧಿಕಾರಿಗಳು ಮಾಡಿದ ಉತ್ತಮ ಕೆಲಸಗಳನ್ನ ಮುಂದುವರೆಸುತ್ತೇನೆ. ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಕ್ರೈಂ ಪ್ರಕರಣಗಳನ್ನ ಪರಿಶೀಲನೆ ಮಾಡಿ ಹೆಚ್ಚಿನ ರೀತಿಯಲ್ಲಿ ಕಂಟ್ರೋಲ್ ಮಾಡುತ್ತೇವೆ ಎಂದು ಬೆಳಗಾವಿಯ ನೂತನ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ  ತಿಳಿಸಿದರು.//////