Belagavi News In Kannada | News Belgaum

ಜನರು ಸಹಕಾರ ಕೊಟ್ರೆ ಲಾಕ್‌ ಡೌನ್‌ ಆಗಲ್ಲ : ಸಿಎಂ ಬಸವರಾಜ ಬೊಮ್ಮಾಯಿ

ಬೆಳಗಾವಿ :  ನೈಟ್‌ ಕರ್ಫ್ಯೂ ವಿಸ್ತರಣೆ ಬಗ್ಗೆ ನಾಳೆ ಅಥವಾ ನಾಡಿದ್ದು ತೀರ್ಮಾನ ತೆಗೆದುಕೊಳ್ಳತ್ತೇವೆ.  ಸರ್ಕಾರದ ಕಟ್ಟು ನಿಟ್ಟಿನ ತೀರ್ಮಾನಕ್ಕೆ ಜನರು ಸಹಕಾರ ಕೊಟ್ಟರೆ ಲಾಕ್‌ ಡೌನ್‌ ಆಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೋವಿಡ್ ಯಾವ ರೀತಿ ಹರಡುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ವಿಶೇಷವಾಗಿ ಬೆಂಗಳೂರಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಾಣು ಹಬ್ಬುತ್ತಿದೆ. ಇವೆಲ್ಲವನ್ನೂ ಗಮನಿಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

ಲಾಕ್‌ ಡೌನ್‌ ಕುರಿತು ಸಚಿವ ಅಶೋಕ ಅವರು ಮಾತನಾಡಿದ್ದಾರೆ. ಆದರೆ ನಮ್ಮ ನಿಲುವು ಬಹಳ ಸ್ಪಷ್ಟ ಇದೆ, ಹಿಂದೆಲ್ಲ ಲಾಕ್‌ ಡೌನ್‌ ಆಗಿತ್ತು. ಅದು ಆಗಬಾರದು ಅಂದ್ರೆ ಜನರು ಸಹ ಮುಖ್ಯ. ಇದೇ ಅರ್ಥದಲ್ಲಿಯೇ ಅಶೋಕ ಅವರು ಹೇಳಿದ್ದಾರೆ  ಎಂದು ತಿಳಿಸಿದ್ದಾರೆ.

ಕಳೆದೊಂದು ವಾರದಿಂದ ಇಡೀ ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಅದರಲ್ಲಿ‌ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ಕೇಸ್ ಬರುತ್ತಿವೆ. ಮುಂಬೈ ಜೊತೆ ಒಡನಾಟ ಇರುವ ಕಾರಣದಿಂದ  ಗಡಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದ್ದೇವೆ. ಗಡಿ ಪ್ರದೇಶಗಳಲ್ಲಿ ಚೆಕ್‌ ಪೋಸ್ಟ್‌ ಗಳ ತೆರೆಯಲಾಗಿದೆ ಎಂದು ಹೇಳಿದರು.

ಕೇವಲ ನಿರ್ಬಂಧ ಅಷ್ಟೇ ಅಲ್ಲದೆ, ನಾವು ಪೂರ್ವ ತಯಾರಿ ಮಾಡಬೇಕಿದೆ. ಕಾರಣ ಕಳೆದ ಬಾರಿ ಆಕ್ಸಿಜನ್‌ ಕೊರತೆ ಆಗಿತ್ತು. ಈ ಬಾರಿ  ಆ ರೀತಿಯಾಗದಂತೆ ಕ್ರಮ ವಹಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಕ್ಸಿಜನ್ ಪ್ಲಾಂಟ್ ರೆಡಿ ಇಟ್ಟುಕೊಳ್ಳಲು ಹೇಳಿದ್ದೇವೆ. ನಾಳೆಯಿಂದ 15 ರಿಂದ 18 ವರ್ಷದ ಮಕ್ಕಳಿಗೆ ಅತ್ಯಂತ ಶಿಸ್ತಿನಿಂದ ವ್ಯಾಕ್ಸಿನೇಷನ್​ಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.//////