Belagavi News In Kannada | News Belgaum

ಟ್ರ್ಯಾಕ್ಟರ್‌ ಪಲ್ಟಿ 45 ದಿನಗಳ ಹಿಂದೆಯಷ್ಟೇ ಮದುವೆಯಾದ ಚಾಲಕ ಸಾವು

ಚಿಕ್ಕಮಗಳೂರು : ಟ್ರ್ಯಾಕ್ಟರ್‌ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಹಳೇ ಕೋಟೆ ಸಮೀಪ ನಡೆದಿದೆ.

ಬಿದರಹಳ್ಳಿಯ ಹರೀಶ್‌ (28) ಮೃತ ಚಾಲಕ. ನಿನ್ನೆ ರಾತ್ರಿ ವೇಳೆ ಇಳಿಜಾರಿನಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾದ  ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಹರೀಶ್ ಆರ್​​ಆರ್​ಎಸ್​ನಲ್ಲಿ ಗುತ್ತಿಗೆ ಆಧಾರದ ಮೇಲೆ ಚಾಲಕನಾಗಿದ್ದ ಕೆಲಸ ಮಾಡುತ್ತಿದ್ದ.  45 ದಿನಗಳ ಹಿಂದೆಯಷ್ಟೇ ಮದುವೆ ಆಗಿದ್ದನು ಎಂದು ತಿಳಿದು ಬಂದಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////