Belagavi News In Kannada | News Belgaum

ಸಾರಿಗೆ ನೌಕರರಿಗೆ ಗುಡ್ ನ್ಯೂಸ್‌ : ವಜಾಗೊಂಡವರ ಮರು ನೇಮಕಾತಿ

ಬಾಗಲಕೋಟೆ : ಮುಷ್ಕರದಲ್ಲಿ ಪಾಲ್ಗೊಂಡು ವಜಾಗೊಂಡಿರುವ ನೌಕರರಿಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಸಹಿ ಸುದ್ದಿಯೊಂದನ್ನು ನೀಡಿದ್ದಾರೆ.

ವಜಾಗೊಂಡಿರುವ ಸಾರಿಗೆ ನೌಕರರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳಲು ನಾಲ್ಕು ವಾರ ಅವಕಾಶ ನೀಡಲಾಗಿದೆ. ನೌಕರರ ಕುಟುಂಬದ ಸ್ಥಿತಿಗತಿ ನೋಡಿ ಈ ನಿರ್ಧಾರ ಕೈಗೊಳ್ಳಲಾಗಿದೆ  ಅಂತಾ ತಿಳಿಸಿದ್ದಾರೆ.

ನೌಕರರು ಮುಷ್ಕರ ಕೈಗೊಳ್ಳುವ ಬದಲು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ./////