Belagavi News In Kannada | News Belgaum

ಸಿಎಂ ತವರು ಕ್ಷೇತ್ರದಲ್ಲಿ ಪಿಡಿಓ ವಿರುದ್ಧ ಭ್ರಷ್ಟಾಚಾರ ಆರೋಪ !

ಹಾವೇರಿ : ಮುಖ್ಯಮಂತ್ರಿ ತವರು ಕ್ಷೇತ್ರದಲ್ಲಿ ಅಕ್ರಮ, ಭ್ರಷ್ಟಾಚಾರಗಳು ಹೆಚ್ಚಾಗುತ್ತಲೆ ಇವೆ. ಇದಕ್ಕೆ ಸಾಕ್ಷಿ ಎಂಬಂತೆ  ಶಿಗ್ಗಾಂವ ತಾಲ್ಲೂಕಿನ ಕುನ್ನೂರ ಗ್ರಾಮ ಪಂಚಾಯ್ತಿ ಪಿಡಿಒ ಅಧಿಕಾರಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ಕುನ್ನೂರು ಗ್ರಾಮಸ್ಥರು, ಗ್ರಾಪಂ.ಸದಸ್ಯರು ಪಿಡಿಓ ಪ್ರಕಾಶ್‌ ಔಂದಕರ್‌ ವಿರುದ್ಧ ದಾಖಲೆಗಳ ಸಮೇತ ಸಿಎಂ ಎದುರು ಆರೋಪ ಮಾಡುವ ಮೂಲಕ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಕುನ್ನೂರು ಗ್ರಾಮ ಪಂಚಾಯ್ತಿಗೆ ಮೂರು ಗ್ರಾಮಗಳು ಬರಲಿವೆ. ಈ ಗ್ರಾಮ ಪಂಚಾಯ್ತಿಯಲ್ಲಿ  11 ವರ್ಷಗಳಿಂದ ಪ್ರಕಾಶ್‌ ಅವರು ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದು,  ಮೋಸ, ಭ್ರಷ್ಟಾಚಾರವನ್ನೇ ನಡೆಸಿದ್ದಾರೆ ಎಂದಿದ್ದಾರೆ.

ಗ್ರಾಮದಲ್ಲಿ ಸ್ವಚ್ಛತೆ ಸೇರಿ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಸರ್ಕಾರದ ಹಣ ಲಪಟಾಯಿಸಿದ್ದಾರೆ. ಜನರಿಗೆ ಮಂಕು ಬೂದಿ ಎರಚಿ, ಲಕ್ಷಾಂತರ ರೂಪಾಯಿ ಗುಳುಂ ಮಾಡಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರಿಂದ ದಾಖಲೆಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನಿಖೆಗೆ ಸೂಚಿಸಿದ್ದೇನೆ ಎಂದಿದ್ದಾರೆ.//////