Belagavi News In Kannada | News Belgaum

ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ಕಾರ್ಯ ಕೈಗೊಳ್ಳಲಾಗುವುದೆಂದು ಕಾಗವಾಡ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲ ಹೇಳಿದರು.

ಶೇಡಬಾಳ : ಕಾಗವಾಡ ವಿಧಾನ ಸಭಾ ಮತಕ್ಷೇತ್ರದಲ್ಲಿ ಬರುವ ಗ್ರಾಮಗಳಲ್ಲಿನ ಮುಖ್ಯ ರಸ್ತೆಗಳನ್ನು ದ್ವಿಪಥ ರಸ್ತೆಗಳನ್ನಾಗಿ ಪರಿವರ್ತಿಸಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ಕಾರ್ಯ ಕೈಗೊಳ್ಳಲಾಗುವುದೆಂದು ಕಾಗವಾಡ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲ ಹೇಳಿದರು.

ಅವರು ಶನಿವಾರ ದಿ. 1 ರಂದು ಉಗಾರ ಬುದ್ರುಕ ಗ್ರಾಮದಲ್ಲಿ ಉಗಾರ-ಕುಸನಾಳ-ಮೋಳವಾಡ ಗ್ರಾಮಗಳಲ್ಲಿನ ಅಪಘಾತ ವಲಯದ ರಸ್ತೆಗಳ 2.50 ಕೋಟಿ ರೂ. ವೆಚ್ಚದ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಗುತ್ತಿಗೆದಾರರು ರಸ್ತೆಗಳನ್ನು ನಿರ್ಮಿಸುವಾಗ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು.

ಈ ಸಮಯದಲ್ಲಿ ಅಥಣಿ ಪಿಎಲ್‍ಡಿ ಬ್ಯಾಂಕ ಅಧ್ಯಕ್ಷ ಶೀತಲಗೌಡ ಪಾಟೀಲ, ಉಗಾರ ಬುದ್ರುಕ ಗ್ರಾಪಂ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಸದಸ್ಯರಾದ ಅಪ್ಪಾಸಾಬ ಚೌಗಲಾ, ಮನೋಜ ಕುಸನಾಳೆ, ವಿನಾಯಕ ಶಿಂಧೆ, ವಿಜಯ ಶಿಂಧೆ, ಪದಮಣ್ಣ ಚೌಗಲೆ, ಅಮೀನ ಶೇಖ, ಸಾಗರ ಪೂಜಾರಿ, ಸಂಗಮೇಶ ಪಡಗಾನೂರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಎಂ.ಹಿರೇಮಠ, ಮಗದುಮ, ಲಕ್ಷ್ಮಣ ಜಾಧವ, ಮುದ್ದು ಮುಲ್ಲಾ ಗುತ್ತಿಗೆದಾರರಾದ ಶಿಂಧೆ ಸಹೋದರರು ಸೇರಿದಂತೆ ಅನೇಕರು ಇದ್ದರು.