Belagavi News In Kannada | News Belgaum

ಪುಣೇರಿ ಪಲ್ಟನ್ ಮಣಿಸಿದ ಬೆಂಗಳೂರು ಬುಲ್ಸ್‌

ಬೆಂಗಳೂರು:  ಪವನ್ ಶೆರಾವತ್  ಮಿಂಚಿದ ದಾಳಿ ಮುಂದುವರೆದಿದ್ದು, ಬೆಂಗಳೂರು ಬುಲ್ಸ್‌  ಸತತ ಐದನೇಯ ಬಾರಿಗೆ ಗೆಲುವು ಸಾದಿಸಿದೆ.  11 ಅಂಕಗಳಿಂದ ಪುಣೇರಿ ಪಲ್ಟನ್‌ ಮಣಿಸಿ, ಬೆಂಗಳೂರು ಗೆಲುವಿನ ಕೇಕೆ ಹಾಕಿದೆ.

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ  ಭಾನುವಾರ  ಪ್ರೊ ಕಬಡ್ಡಿ ಟೂರ್ನಿಯಲ್ಲಿ  ಬೆಂಗಳೂರು ಬುಲ್ಸ್‌ – ಪುಣೇರಿ ಪಲ್ಟನ್ ಮುಖಾಮುಖಿಯಾಗಿದ್ದವು. ಮೊದಲಾರ್ಧದ ವಿರಾಮದ ವೇಳೆಗೆ ಪುಣೇರಿ ತಂಡವು 18–13ರಿಂದ ಮುನ್ನಡೆ ಸಾಧಿಸಿತ್ತು.   ಎರಡನೇಯ ಸುತ್ತಿನ  ಪವನ್‌ ಶರಾವನ್‌ ದಾಳಿಗೆ ಬೆಂಗಳೂರು ಬುಲ್ಸ್‌ ನ ಜಯಭೇರಿ ಬಾರಿಸಿತು.  ಬೆಂಗಳೂರು ತಂಡವು 40–29ರಿಂದ ಪುಣೇರಿ ಪಲ್ಟನ್ ವಿರುದ್ಧ ಗೆದ್ದಿತು. ಟೂರ್ನಿಯಲ್ಲಿ ಬೆಂಗಳೂರು ತಂಡಕ್ಕೆ ಇದು ನಾಲ್ಕನೇ ಜಯ.

ಅದರಲ್ಲಿ ಪವನ್ ಶೆರಾವತ್ ಮತ್ತು  ಚಂದ್ರನ್ ರಂಜೀತ್  (6 ಅಂಕ) ಅವರ ಆಟ ಮಹತ್ವದ್ದಾಗಿತ್ತು. ಅವರಿಗೆ ಭರತ್ (5) ಕೂಡ ಉತ್ತಮ ಜೊತೆ ನೀಡಿದರು. ರಕ್ಷಣಾ ವಿಭಾಗದಲ್ಲಿ ಸೌರಭ್ ನಂದಲ್ (4), ಮೋಹಿತ್ ಶೇರಾವತ್ (3) ಮತ್ತು ಅಮನ್ (4) ಕೂಡ ಎದುರಾಳಿ ರೇಡರ್‌ಗಳಿಗೆ ಕಡಿವಾಣ ಹಾಕಿದರು. ಪುಣೇರಿ ತಂಡದ ಅಸ್ಲಂ ಆರು ಅಂಕ ಗಳಿಸಿದರು./////