Belagavi News In Kannada | News Belgaum

ಮಹಿಳೆಯರ ಸಮಾನತೆ ಹಕ್ಕಿಗಾಗಿ ಹೋರಾಡಿದ ಶಿಕ್ಷಕಿ ಸಾವಿತ್ರಿಬಾಯಿ ಪುಲೆ

ಹುಣಸಗಿ: ದೇಶದ ಮಹಿಳೆಯರ ಸಮಾನತೆ ಹಕ್ಕಿಗಾಗಿ ಹೋರಾಡಿದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಎಂದು ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಸುರೇಶ ಕೀರಣಗಿ ಹೇಳಿದರು,

ಪಟ್ಟಣದ ವಜ್ಜಲ ಶಾಂತಗೌಡ ಪಾಟೀಲ ಮೆಮೋರಿಬಲ್ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸಾವಿತ್ರಿಬಾಯಿ ಪುಲೆ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದ ಅನಿಷ್ಠ ಪದ್ದತಿಗಳಾದ ಬಾಲ್ಯ ವಿವಾಹ, ಸತಿ ಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ಧ ಹೋರಾಟ ಮಾಡಿ, ಮಹಿಳೆರಿಗಾಗಿ ಶಾಲೆ, ಅಬಲಾಶ್ರಮ ಮಾಡಿದ ಕೀರ್ತಿ ಇವರದು.

ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಬ್ರಿಟೀಷ ಸರಕಾರ “ಇಂಡಿಂನ್ ಫಸ್ಟ ಲೇಡಿ ಟೀಚರ್” ಎಂದು ಬಿರುದು ಕೊಟ್ಟು ಸನ್ಮಾನಿಸಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತ ಭೀಮಶೇನರಾವ್ ಕುಲಕರ್ಣಿ ಮಾತನಾಡಿ, ಮಹಾನ ವ್ಯಕ್ತಿಗಳ ಜಯಂತಿ ಆಚರಣೆ ಮಾಡಿ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನಿಂಗು ನಾಯಕ, ಬಸವರಾಜ ಜಾಧವ, ಪದ್ಮಾವತಿ, ಬಸವರಾಜೇಶ್ವರಿ, ಬಸಮ್ಮ ಗೋರಬಾಳ ಮಾತನಾಡಿದರು.
ಈ ಸಂದರ್ಭ ಪ್ರಾಚಾರ್ಯ ಬಸವರಾಜ ಮರೋಳ, ಕೃಷ್ಣಾ ದೇಶಪಾಂಡೆ, ಬಸವರಾಜ ತಳ್ಳಳ್ಳಿ, ಶ್ರೀಶೈಲ ಸಜ್ಜನ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಸಾಯಿ ಪಟೇಲ ನೀರೂಪಿಸಿದರು. ರಿಯಾನಬಿ ವಂದಿಸಿದರು.