Belagavi News In Kannada | News Belgaum

ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆ ಗ್ರಾಪಂ.ಅಧ್ಯಕ್ಷ, ಸದಸ್ಯರಿಂದ ಮನಬಂದಂತೆ ಹಲ್ಲೆ

ಬೆಳಗಾವಿ : ಗ್ರಾಮ ಪಂಚಾಯ್ತಿ ಅಕ್ರಮ ಬಯಲಿಗೆಳೆದ ವ್ಯಕ್ತಿಯನ್ನು ಅಧ್ಯಕ್ಷ ಹಾಗೂ ಬೆಂಬಲಿತ ಸದಸ್ಯರು ಮನಬಂದಂತೆ ಥಳಿಸಿರುವ ಘಟನೆ  ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಸಂಗಪ್ಪ ಗೂಡಗಾರ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ. ಹೂಲಿ ಗ್ರಾ.ಪಂ ಅಧ್ಯಕ್ಷ ವಿರೂಪಾಕ್ಷ ತೊರಗಲ್, ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಲ್ಲೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಏನಿದು ಪ್ರಕರಣ ?

2020-21ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಅಧ್ಯಕ್ಷ ವಿರೂಪಾಕ್ಷ ತೊರಗಲ್‌ ಹಾಗೂ ಪಿಡಿಒ ಫಕ್ಕಿರಪ್ಪ ಹನಸಿ ವಿರುದ್ಧ ಹಣ ದುರುಪಯೋಗ ಆರೋಪ ಕೇಳಿ ಬಂದಿತ್ತು. ಅಕ್ರಮದ ಬಗ್ಗೆ ಸಂಗಪ್ಪ ಜಿಲ್ಲಾ ಪಂಚಾಯ್ತಿ ಸಿಇಓ ಅವರ ಮೊರೆ ಹೋಗಿದ್ದರು. ಇದರಿಂದ ಅಕ್ರಮ ತನಿಖೆ ಮಾಡುವಂತೆ ಸಿಇಓ ಸೂಚನೆ ನೀಡಿದ್ದರು.

ಈ ಹಿನ್ನಲೆಯಲ್ಲಿ ನಿನ್ನೆ ತಾಲ್ಲೂಕು ಪಂಚಾಯ್ತಿ ಎ.ಡಿ.ಸಂಗನಗೌಡ ಹಂದ್ರಾಳ ನೇತೃತ್ವದಲ್ಲಿ ತನಿಖೆಗೆ ಮುಂದಾಗಿದ್ದರು.  ಈ ಘಟನೆಯಿಂದ ಕೋಪಗೊಂಡಿರುವ ಅಧ್ಯಕ್ಷ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಹಲ್ಲೆ ನಡೆಸಿರುವ ವಿಡಿರಯೋ ವೈರಲ್‌ ಆಗಿದೆ.