Belagavi News In Kannada | News Belgaum

ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ತರಗತಿ ಆರಂಭಕ್ಕೆ ಆಗ್ರಹ

ಚಿಕ್ಕೋಡಿ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ತರಗತಿಗಳನ್ನು ನಡೆಯಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಎಬಿವಿಪಿ ಕಾರ್ಯಕರ್ತರು ಉಪವಿಭಾಗಾಧಿಕಾರಿಗಳ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ ಯವರಿಗೆ ಮನವಿ ಸಲ್ಲಿಸಿದರು.

ಕರೋನಾ ಎರಡನೇ ಅಲೆಗೆ ತತ್ತರಿಸಿದ್ದ ಕರ್ನಾಟಕ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಮರು ಪ್ರಾರಂಭವಾಗಿ ವಿದ್ಯಾರ್ಥಿಗಳೆಲ್ಲ ಉತ್ಸಾಹದಿಂದ  ಕಾಲೇಜುಗಳಿಗೆ ಬರುತ್ತಿರುವುದು ಸಂತೋಷದ ಸಂಗತಿ. ಆದರೆ ಭೌತಿಕ ತರಗತಿಗಳು ಆರಂಭಗೊಂಡರು  ಇನ್ನೂ ರಾಜ್ಯದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ  ಪೂರ್ಣ ಪ್ರಮಾಣದ ಪಾಠಗಳು ನಡೆಯದಿರುವುದು ಶೋಚನಿಯ.

ರಾಜ್ಯದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ಸರ್ಕಾರ ಒಂದು ತಿಂಗಳ ತಡವಾಗಿ ನೇಮಿಸಿಕೊಂಡಿದೆ. ಅದು ಅವಶ್ಯಕತೆಗಿಂತ ಕಡಿಮೆ ಅಂದರೆ ಶೇ. 80 ರಷ್ಟು ಉಪನ್ಯಾಸಕರನ್ನು  ನೇಮಿಸಿಕೊಂಡಿದೆ. ಅಕ್ಟೋಬರ್ 28ರಿಂದ ಅತಿಥಿ ಉಪನ್ಯಾಸಕರು ಪಾಠಗಳನ್ನು ಮಾಡುತ್ತಿದ್ದರು. ಆದರೆ ಕಳೆದ 10-12-2021 ರಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿದ್ದಾರೆ. ಅಂದಿನಿಂದ ಇಂದಿನವರೆಗೆ  ತರಗತಿಗಳು ನಡೆಯುತ್ತಿಲ್ಲ.  ಇದರಿಂದ ವಿದ್ಯಾರ್ಥಿಗಳಿಗೆ ಬಹಳ  ಸಮಸ್ಯೆಯಾಗಿದೆ.  ಪ್ರತಿದಿನ ವಿದ್ಯಾರ್ಥಿಗಳು ಪಾಠ ಕೇಳಲೂ ಕಾಲೇಜಿಗೆ ಬಂದರೆ ಪಾಠಗಳು ನಡೆಯದಿರುವುದು ಶೋಚನೀಯ.

ವಿದ್ಯಾರ್ಥಿಗಳಿಗೆ ಸಿ-1 ಪರೀಕ್ಷೆ ಈ ತಿಂಗಳ ಕೊನೆಯಲ್ಲಿ  ಬರುವುದರಿಂದ  ಆದಷ್ಟು ಬೇಗ ಈ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಹಿಡಿಯಬೇಕು. ಸರಕಾರ ಇದಕ್ಕೆ ಸ್ಪಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿ ಪರಿಷತ್ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

ಚಿಕ್ಕೋಡಿ ಜಿಲ್ಲಾ ಸಹ ಸಂಚಾಲಕರಾದ ಪ್ರಸಾದ್ ಎಂ, ಮಹಾಂತೇಶ ಪೂಜೇರಿ, ಚಂದ್ರಶೇಖರ ಗುಡಸಿ, ರಮೇಶ ಚೌರಿ, ಮೈಲಾರದೇವ ಪೂಜಾರಿ, ಶೀತಲ ಬಾಬಣ್ಣವರ, ಅನುಪ ಪಾಟೀಲ ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.///////