Belagavi News In Kannada | News Belgaum

ಬಿಜೆಪಿ ಸಂಸದ, ಸಚಿವರ ಗುಸುಗುಸು ಮಾತು ಸಂಚಲನ

 

ತುಮಕೂರು : ನಮ್ಮ ಮಂತ್ರಿ ಉತ್ತರ ಕೋರಿಯಾದ ಕಿಮ್‌ ಜಾಂಗ್‌ ಉನ್‌ ಇದ್ದಂಗೆ. ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜ್‌ ಅವರು ಬೈರತಿ ಬಸವರಾಜ್‌ ಅವರೊಂದಿಗೆ ಗುಸುಗುಸು ಮಾತು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ತುಮಕೂರಿನಲ್ಲಿ ಸುದ್ದಿಗೋಷ್ಠಿ ವೇದಿಕೆಯಲ್ಲಿ ಜಿ.ಎಸ್.ಬಸವರಾಜ್‌ ಹಾಗೂ ಸಚಿವ ಬೈರತಿ ಬಸವರಾಜ್‌  ಮಾತುಕತೆ ನಡೆಸಿದ್ದಾರೆ.  ಈ ವೇಳೆ ಮಾಧುಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತ ಸಂಭಾಷಣೆಯ ಆಡಿಯೋ, ವಿಡಿಯೋ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಂಭಾಷಣೆ :

ಜಿ.ಎಸ್.ಬಸವರಾಜ್: ಈ ನನ್ನ ಮಗ ನಮ್ಮ ಮಂತ್ರಿ ಹೆಂಗೆ ಗೊತ್ತಾ. ಕೊರಿಯಾದ ಕಿಮ್ ಇದಾನಲ್ಲ
ಬೈರತಿ ಬಸವರಾಜ್: ಸುಮ್ನಿರು ಆಮೇಲೇ ಮಾತನಾಡೋಣಜಿ.ಎಸ್. ಬಸವರಾಜ್: ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನೆಲ್ಲಾ. ಒಂದು ಸೀಟ್ ಬರಲ್ಲ
ಜಿ.ಎಸ್. ಬಸವರಾಜ್: ಮಾತು ಎತ್ತಿದ್ರೆ ಹೊಡಿ ಬಡಿ ಕಡಿ ಅಂತಾನೆ
ಜಿ.ಎಸ್. ಬಸವರಾಜ್: ಅವನ್ಯಾರೋ ಇಂಜಿನಿಯರ್​ಗೆ ಹೇಳ್ತಾನೆ. ಹೆಂಡ್ತಿ ಸೀರೆ ಒಗೆಯೋಕೆ ಲಾಯಕ್ ನೀನು ಅಂತಾ
ಜಿ.ಎಸ್. ಬಸವರಾಜ್: ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೆ ಹೇಳ್ತಾನೆ. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ
ಜಿ.ಎಸ್. ಬಸವರಾಜ್: ಮೊನ್ನೆ ಸಾವಿರ ಕೋಟಿ ಡಿಕ್ಲೇರ್ ಮಾಡಿಕೊಂಡು ಬಂದವ್ನೆ
ಜಿ.ಎಸ್. ಬಸವರಾಜ್: ನಮಗೆ ಯಾರಿಗೂ ಇನ್ವಿಟೇಷನ್ ಇಲ್ಲ. ಕರೆಯೋದೂ ಇಲ್ಲ. ನಿಮ್ಮ ಇಲಾಖೆಗೆ ಬಂದು ಹೇಳಿದರೆ ತಲೆಕೆಡಿಸಕೊಳ್ಳಬೇಡಿ./////