Belagavi News In Kannada | News Belgaum

ಮೊಬೈಲ್‌ ಕೆಟ್ಟಿದಕ್ಕೆ ಯುವಕ ಆತ್ಮಹತ್ಯೆ !

ಮೈಸೂರು : ಮೊಬೈಲ್‌ ಕೆಟ್ಟು ಹೋಗಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಯರಗನಹಳ್ಳಿಯ ಜನತಾ ಕಾಲೋನಿಯಲ್ಲಿ ನಡೆದಿದೆ.

ಮಹೇಂದ್ರ( 22) ನೇಣಿಗೆ ಶರಣಾದ ಯುವಕ. ಇತ್ತೀಚಿಗೆ ಮೃತ ಯುವಕನ ಮೊಬೈಲ್​ ನೀರಿಗೆ ಬಿದ್ದು ಕೆಟ್ಟು ಹೋಗಿತ್ತು. ಆದ್ರೆ ಅದನ್ನು ರಿಪೇರಿ ಮಾಡಿಸಲು ಆತನ ಬಳಿ ಹಣ ಇರಲಿಲ್ಲ. ಇದರಿಂದ ಬೇಸತ್ತು ಯುವಕ ನೇಣಿಗೆ ಕೊರಳೊಡ್ಡಿದ್ದಾನೆ ಎನ್ನಲಾಗಿದೆ.

ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮೊಬೈಲ್ ಗೇಮ್ಸ್‌‌ಗಳಿಗೆ ತುಂಬಾ ಅಡಿಟ್ ಆಗಿದ್ದ ಎನ್ನಲಾಗಿದೆ. ಈ ಮೊದಲು ಸಾಲ ಮಾಡಿಕೊಂಡು ಆರ್ಥಿಕ ಸಮಸ್ಯೆಯಲ್ಲಿದ್ದ ಯುವಕನಿಗೆ ಮೊಬೈಲ್ ರಿಪೇರಿ ಮಾಡಿಸಿಕೊಳ್ಳಲು ಸಾಧ್ಯವಾಗದೆ ಮಾನಸಿಕವಾಗಿ ನೊಂದು, ಮನೆಯ ಪಕ್ಕದಲ್ಲೇ ಇರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////