Belagavi News In Kannada | News Belgaum

ಕೊವಿಡ್​ನಿಂದ ಐಸಿಯುನಲ್ಲಿ ತಂದೆ ಸಾವು ಖ್ಯಾತ ಗಾಯಕನ ಕರುಣಾಜನಕ ಸ್ಥಿತಿ

ಬೆಂಗಳೂರು : ಕೊರೊನಾ ವೈರಸ್​ ಕಾರಣದಿಂದ ಜನರು ಎದುರಿಸುತ್ತಿರುವ ಕಷ್ಟ ಒಂದೆರಡಲ್ಲ. ಎಲ್ಲರ ಬದುಕಿನಲ್ಲಿ ಅನಿಶ್ಚಿತತೆ ಆವರಿಸಿದೆ. ವಿಶಾಲ್​ ದದ್ಲಾನಿ ಅವರ ತಂದೆ ಮೋತಿ ದದ್ಲಾನಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಮೃತಪಟ್ಟಿದ್ದು, ಅವರ ಹತ್ತಿರ ಹೋಗದಂತ ಸ್ಥಿತಿ ಅವರಿಗೆ ಎದುರಾಗಿದೆ.

ಕೊವಿಡ್​  ಸೋಂಕು ತಗುಲಿದರೆ ಆತ್ಮೀಯರಿಂದಲೂ ದೂರ ಇರಬೇಕಾದ ಪರಿಸ್ಥಿತಿ ಬಂದೊದಗುತ್ತಿದೆ. ಪ್ರೀತಿಪಾತ್ರರ ಅಂತಿಮ ಸಂಸ್ಕಾರದಲ್ಲೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಬಾಲಿವುಡ್​ನ ಖ್ಯಾತ ಗಾಯಕ ವಿಶಾಲ್​ ದದ್ಲಾನಿ  ಅವರಿಗೆ ಅಕ್ಷರಶಃ ಇಂಥ ಸ್ಥಿತಿ ಬಂದಿದೆ. ಅವರ ತಂದೆ ಮೃತರಾಗಿದ್ದಾರೆ. ಆದರೆ ಕೊನೇ ಗಳಿಗೆಯಲ್ಲಿ ಅಪ್ಪನ ಜೊತೆ ಇರಲು ವಿಶಾಲ್​ ದದ್ಲಾನಿ ಅವರಿಗೆ ಸಾಧ್ಯವಾಗಿಲ್ಲ. ಕೊವಿಡ್​ ಪಾಸಿಟಿವ್​  ಆಗಿರುವ ಅವರು ತಮ್ಮವರಿಂದಲೇ ದೂರ ಉಳಿದುಕೊಂಡು ನೋವು ಅನುಭವಿಸುತ್ತಿದ್ದಾರೆ.

ಬಾಲಿವುಡ್​ನಲ್ಲಿ ನೂರಾರು ಗೀತೆಗಳನ್ನು ಹಾಡಿ ಫೇಮಸ್​ ಆಗಿರುವ ವಿಶಾಲ್​ ದದ್ಲಾನಿ. ಶುಕ್ರವಾರ (ಜ.7) ಅವರಿಗೆ ಕೊರೊನಾ ಪಾಸಿಟಿವ್​ ಆಗಿತ್ತು. ಆ ಕಾರಣದಿಂದ ಅವರು ಎಲ್ಲರಿಂದ ಐಸೋಲೇಟ್​ ಆಗಿದ್ದರು. ಕಳೆದ ಕೆಲವು ದಿನಗಳಿಂದ ಅವರ ತಂದೆ ಮೋತಿ ದದ್ಲಾನಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಮೋತಿ ದದ್ಲಾನಿ ನಿಧನರಾಗಿದ್ದಾರೆ. ಅಪ್ಪನ ಕೊನೇ ಕ್ಷಣಗಳಲ್ಲಿ ಜೊತೆಗಿರಲು ವಿಶಾಲ್​ಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.//////