Belagavi News In Kannada | News Belgaum

ಬಿಜೆಪಿ ಶಾಸಕನ ಕೆನ್ನೆಗೆ ಹೊಡೆದ ರೈತ : ವಿಡಿಯೋ ವೈರಲ್‌

ಲಕ್ನೋ : ರೈತನೊಬ್ಬ ಉನ್ನಾವೋ ಬಿಜೆಪಿ ಶಾಸಕ ಪಂಕಜ್ ಗುಪ್ತಾ ಅವರ ಕೆನ್ನೆಗೆ ಬಾರಿಸುತ್ತಿರುವ ವೀಡಿಯೋವೊಂದು ವೈರಲ್ ಆದ ಬೆನ್ನಿಗೇ ಸ್ಪಷ್ಟೀಕರಣ ನೀಡಿರುವ ಶಾಸಕ ʼಆತ ಕೆನ್ನೆಗೆ ತಟ್ಟಿದರು ಅಷ್ಟೇʼ ಎಂದು ಹೇಳಿದ್ದಾರೆ.

ಈ ವೀಡಿಯೋ ಕ್ಲಿಪ್ ಮೂರು ದಿನಗಳ ಹಿಂದೆ ತೆಗೆದಿದ್ದೆನ್ನಲಾಗಿದ್ದು ಪ್ರತಿಮೆ ಅನಾವರಣ ಕಾರ್ಯಕ್ರಮವೊಂದರ ಭಾಗವಾಗಿ ಶಾಸಕ ವೇದಿಕೆಯಲ್ಲಿ ಕುಳಿತಿದ್ದ ಸಂದರ್ಭ ವೃದ್ಧನೊಬ್ಬ ಅವರ ಹತ್ತಿರಕ್ಕೆ ಬಂದು ಕೆನ್ನೆಗೆ ಬಾರಿಸಿದಂತೆ ಕಾಣಿಸುತ್ತದೆ. ಆಗ ಒಂದಿಬ್ಬರು ವ್ಯಕ್ತಿಗಳು ಆತನನ್ನು ಸುತ್ತುವರಿದು ಆತನನ್ನು ಪ್ರಶ್ನಿಸಿ ಆತನನ್ನು ವೇದಿಕೆಯ ಕೆಳಕ್ಕೆ ತರುತ್ತಾರೆ. ಆತ ಹೀಗೇಕೆ ಮಾಡಿದನೆಂದು ತಿಳಿದು ಬಂದಿಲ್ಲ.

ಈ ವಿಚಾರವನ್ನೇ ಎತ್ತಿಕೊಂಡು ಟ್ವೀಟ್ ಮಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್,”ಕೆನ್ನೆಗೆ ಬಾರಿಸಿದ್ದು ಶಾಸಕರಿಗಲ್ಲ, ಬದಲು ಬಿಜೆಪಿ ನೇತೃತ್ವದ ಯೋಗಿ ಆದಿತ್ಯನಾಥ್ ಸರಕಾರದ ಕೆಟ್ಟ ನೀತಿಗಳು, ಆಡಳಿತ ಮತ್ತು ಸರ್ವಾಧಿಕಾರದ ಆಳ್ವಿಕೆಗೆ” ಎಂದು ಬರೆದಿದ್ದಾರೆ.///////