Belagavi News In Kannada | News Belgaum

ಆತ್ಮ ರಕ್ಷಣಾ ಕಲೆಗಳಲ್ಲಿ ಕರಾಟೆಗೆ ಅಗ್ರ ಸ್ಥಾನ

ಅಥಣಿ: ಮಹಿಳೆಯರು ತಮ್ಮ ಆತ್ಮರಕ್ಷೆ ಮಾಡಿಕೊಳ್ಳಲು ಕರಾಟೆ ವಿದ್ಯೆ ಕಲಿಯುವದು ಅವಶ್ಯಕವಾಗಿದೆ, ಆತ್ಮ ರಕ್ಷಣೆ ಕಲೆಗಳಲ್ಲಿ ಕರಾಟೆಗೆ ಅಗ್ರ ಸ್ಥಾನ ಇದೆ ಎಂದು ಶೀತಲ್ ಹೊಂಗಲ್ ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಆರ.ಎಚ್.ಕುಲಕರ್ಣಿ ಆಡಿಟೋರಿಯಮಂದಲ್ಲಿ   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ನಿಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ ಉದ್ಘಾಟಿಸಿ ಮಾತನಾಡಿದರು.
ತಾಲೂಕ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ ಮಾತನಾಡಿ ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕೇವಲ ಊಟ ವಸತಿ ಮತ್ತು ಶಿಕ್ಷಣದ ವ್ಯವಸ್ಥೆಯ ಜೊತೆಗೆ ಬಾಲಕೀಯರು ತಮ್ಮನ್ನು ತಾವು ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಾಗೂ ದೌರ್ಜನ್ಯ ಮತ್ತು ಶೋಷಣೆಗಳ ವಿರುದ್ದ ಹೋರಾಡಲು ಆತ್ಮ ಸೈರ್ಯ ತುಂಬುವ ದಿಶೆಯಲ್ಲಿ  ಕರಾಟೆಯಂತ  ಆತ್ಮರಕ್ಷಣೆ ಕಲೆಗಳನ್ನು ವಿದ್ಯಾರ್ಥೀನೀಯುರು ಪಡೆದುಕೊಳ್ಳಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ, ಈ ದಿಸೆಯಲ್ಲಿ ಕರಾಟೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿದ್ದು ಪ್ರತಿ ವಾರಕ್ಕೆ ಎರಡು ಅವಧಿಗಳಲ್ಲಿ ಕರಾಟೆ ತರಬೇತಿಯನ್ನು ನೀಡಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕರಾಟೆ ತರಬೇತಿದಾರ ಮೋಹನಸಿಂಗ ರಜಪೂತ ಹಾಗೂ ಈ ತರಬೇತಿಯ ತರಬೇತಿದಾರರಾದ ರಂಜೀತಾ ರಾಜು ಸದಲಗಿ ಮಾತನಾಡಿದರು. ಇದೇ ವೇಳೆ ರಂಜೀತಾ ಇವರಿಂದ ಕರಾಟೆ ಪ್ರಾತ್ಯಕ್ಷಿಕೆ ನಡೆಸಲಾಯಿತು. ವಿದ್ಯಾರ್ಥಿನೀಯರಾದ ಭವಾನಿ ಹುಡೇದ, ಆಶಾ ಚೆನ್ನನವರ, ಮತ್ತು ಕಾಜಲ ಮರಗಾನಿ ತರಬೇತಿ ಕುರಿತು ಅನಿಸಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶೀತಲ್ ಹೊಂಗಲ್, ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ,  ಮೇಲ್ವಿಚಾರಕರುಗಳಾದ ಎಸ್.ಕೆ.ಬಸಣ್ಣವರ, ಬಿ.ಆರ್. ಯಲ್ಲಟ್ಟಿ, ಎ.ಎಸ್. ಸತಿಗೌಡರ, ಎಂ.ಎ. ಗಾಡಿವಡ್ಡರ, ಪಿ.ಎಲ್.ಮಾಳಗೊಂಡ, ಕೇದಾರಿ ಬಾಗಿ, ಪಿ.ಎಸ್.ಮಲಗೌಡರ, ಮನೋಹರ ಬ್ಯಾಕೋಡ, ಆರ್,ಎ,ಮೋಮಿನ, ರುದ್ರಗೌಡ ಭಾವಿಮನಿ, ಪಿ.ಕೆ ಬಡಿಗೇರ, ಸಂಜು ಕೋರಿ ಸೇರದಂತೆ ಅನೇಕರು ಉಪಸ್ಥಿತರಿದ್ದರು.
“ನಮ್ಮಂತ ಬಾಲಕೀಯರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಇಲ್ಲಿಯವರೆಗೆ ಶಿಕ್ಷಣ, ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತಿತ್ತು ಈ ವರ್ಷದಿಂದ ಕರಾಟೆ ತರಬೇತಿ ನೀಡುವದರೊಂದಿಗೆ ನಾವು ಪುಂಡರಿಂದ ಅನುಭವಿಸುವ ದೌರ್ಜನ್ಯಗಳನ್ನು ಎದುರಿಸಲು ಸನ್ನದ್ದರನ್ನಾಗಿ ಮಾಡಲಾಗುತ್ತಿದೆ. ಇಲಾಖೆಯ ಈ ಕಾರ್ಯ ಅಭಿನಂದನೀಯ”
“ಭವಾನಿ ಹುಡೇದ
   ವಿದ್ಯಾರ್ಥಿನಿ”