Belagavi News In Kannada | News Belgaum

ರಾಜ್ಯದಲ್ಲಿ ಇಂದು 12 ಸಾವಿರ ಕೋವಿಡ್ ಕೇಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ 12 ಸಾವಿರ ಪ್ರಕರಣಗಳು ದೃಢ ಪಟ್ಟಿವೆ. ಶನಿವಾರ 8,906 ಕೇಸ್ ದೃಢಪಟ್ಟಿದ್ದವು.
ರಾಜ್ಯದಲ್ಲಿಒಟ್ಟು 04 ಸಾವು ವರದಿಯಾಗಿದೆ.
ಪಾಸಿಟಿವಿಟಿ ದರ 6.33%ಇದ್ದು, ಇಂದು 901 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಬೆಂಗಳೂರಿನಲ್ಲಿ 40 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ 49,602 ಸಕ್ರಿಯ ಪ್ರಕರಣಗಳಿವೆ. ಇಂದು 1,89,499 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ./////