Belagavi News In Kannada | News Belgaum

ವರದಕ್ಷಿಣೆಯ ಕಿರುಕುಳಕ್ಕೆ ಬೇಸತ್ತು 2 ವರ್ಷದ ಮಗಳೊಂದಿಗೆ ತಾಯಿ ಆತ್ಮಹತ್ಯೆ

ಕೋಲಾರ: ಪತಿ ವರದಕ್ಷಿಣೆಯ  ಕಿರುಕುಳ ಬೇಸತ್ತು 2 ವರ್ಷದ ಮಗಳೊಂದಿಗೆ ತಾಯಿ ನದಿಗೆ ಹಾರಿ ಆತ್ಮಹತ್ಯೆ ಶರಣಾಗಿರುವ ದುರ್ಘಟನೆ  ರೀನಿವಾಸಪುರ ತಾಲ್ಲೂಕು ಮಂಡ್ಯಾಲ ಗ್ರಾಮದಲ್ಲಿ ನಡೆದಿದೆ.

ತಾಯಿ ಮಂಜುಳಾ( 24) , 2 ವರ್ಷದ ಮಗಳು ಶಾಲಿನಿ ಎಂದು ಹೇಳಲಾಗುತ್ತಿದೆ. ಎರಡು ದಿನದಗಳ ಹಿಂದೆ ತಾಯಿ ಮತ್ತು ಮಗಳು ಕಾಣೆಯಾಗಿದ್ದರು. ಇಂದು ಚೆಕ್ ಡ್ಯಾಂ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಪತಿ ರವಿ ವರದಕ್ಷಿಣೆಯ ಸಲುವಾಗಿ ಕಿರುಕುಳ ನೀಡುತ್ತಿದ್ದ ಎಂದು ಮಂಜುಳ ಕುಟುಂಬಸ್ಥರಿಂದ ರವಿ ವಿರುದ್ಧ ರಾಯಲಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.//////